ಬೆಂಗಳೂರು:
ನನ್ನ ನೇತೃತ್ವದಲ್ಲಿ ಹೈಕಮಾಂಡ್ ನಾಯಕರನ್ನು ಸಚಿವರ ನಿಯೋಗ ಭೇಟಿ ಮಾಡುತ್ತಾರೆ ಎಂಬ ಸುದ್ದಿ ಸುಳ್ಳು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಯಾರು ಇಂತಹ ಸುದ್ದಿ ಹುಟ್ಟುಹಾಕುತ್ತಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ನಾಯಕತ್ವದಲ್ಲಿ ಸಚಿವರುಗಳು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಆಗುತ್ತಾರೆ ಎಂದು ಸುದ್ದಿ ಬರುತ್ತಿದೆ. ನನಗೇ ಅದು ಗೊತ್ತಿಲ್ಲ. ಅದು ಯಾರು ಇದನ್ನು ಹೇಳಿದ್ರೋ ಗೊತ್ತಿಲ್ಲ. ಅಂತಹ ಯಾವುದೇ ಬೆಳವಣಿಗೆ ಇಲ್ಲ. ನಾನು ಯಾವುದೇ ನಿಯೋಗವನ್ನು ಹೈಕಮಾಂಡ್ ಬಳಿ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ನೇತ್ರತ್ವದಲ್ಲಿ ಹೈಕಮಾಂಡ್ ಭೇಟಿ ಮಾಡುವಂತಹ ಯಾವುದೇ ರಾಜಕೀಯ ಬೆಳವಣಿಗೆಯೂ ಇಲ್ಲ. ನಾನು ಮೊನ್ನೆಯೇ ಹೇಳಿದ್ದೇನೆ. ಇಲಾಖೆ ಕೆಲಸ ಇದ್ದಾಗ ಹೋಗುತ್ತೇನೆ ಬಿಟ್ಟರೇ ಬೇರೆಬೇರೆ ವಿಚಾರಕ್ಕೆ ನಾನು ದೆಹಲಿಗೆ ಹೋಗಲ್ಲ. ದೆಹಲಿಗೆ ಹೋಗಬಾರದು ಅಂತ ಏನಿಲ್ಲ. ಬ್ಯಾನ್ ಆರ್ಡರ್ ಕೂಡಾ ಇಲ್ಲ. ದೆಹಲಿಗೆ ಹೋಗೋ ಅಗತ್ಯ ಇಲ್ಲ. ಅಗತ್ಯ ಬಿದ್ದಾಗ ಹೋಗುತ್ತೇನೆ ಎಂದು ತಿಳಿಸಿದರು.