ಚಳ್ಳಕೆರೆ:
ನಗರದಲ್ಲಿ ಬುಧವಾರ, ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಮನೆ ಕುಸಿದು, ಹಲವು ಕಡೆ ಮನೆಗಳಿಗೆ ಹಾನಿಯಾದ ಸ್ಥಳಕ್ಕೆ ಶುಕ್ರವಾರ ಶಾಸಕ ಟಿ.ರಘುಮೂರ್ತಿ ಮತ್ತು ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದಿಂದ ಪರಿಹಾರ ಕೂಡಲೇ ಕೊಡಿಸುವಂತೆ ಅಧಿhಕಾರಿಗಳಿಗೆ ಸೂಚನೆ ನೀಡಿದರು.
ವಾರ್ಡ್ ನಂ.18ರಲ್ಲಿ ಮೂರು ಮನೆಗಳಿಗೆ ಕುಸಿದು ಸಂಪೂರ್ಣವಾಗಿ ಹಾನಿಗೊಳಾಗಿದ್ದು, ಅದೇ ರೀತಿ ವಾರ್ಡ್ 22, 23ರಲ್ಲೂ ಸಹ ಒಟ್ಟು 4 ಮನೆಗಳು ಕುಸಿದು ಹಾನಿಗೊಳಲಾಗಿದ್ದವು. ವಾರ್ಡ್ ನಂ.6ರಲ್ಲೂ ಸಹ ಮೂರು ಮನೆಗಳು ಕುಸಿದ್ದು ಹಾನಿಗೊಳಲಾಗಿದ್ದನ್ನು ವೀಕ್ಷಿಸಿದ ಶಾಸಕರು ಈ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಸೂಚನೆ ನೀಡಿದರು. ರಹೀಂ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ನಿವಾಸಿಗಳು, ಹಳ್ಳದ ನೀರು ಮನೆ, ದೇವಸ್ಥಾನಕ್ಕೆ ನುಗ್ಗಿ ಹೆಚ್ಚು ತೊಂದರೆಯಾಗುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಂಡಾಗ ಹಳ್ಳದಲ್ಲಿರುವ ಹೂಳನ್ನು ತೆಗೆಸುವಂತೆ ಪೌರಾಯುಕ್ತ ಪಿ.ಪಾಲಯ್ಯನವರಿಗೆ ಸೂಚನೆ ನೀಡಿದರು.
ತಹಶೀಲ್ಧಾರ್ ಎನ್.ರಘುಮೂರ್ತಿ ಮಾತನಾಡಿ, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ವರದಿ ಕಳುಹಿಸಿದ ನಂತರ ಹೆಚ್ಚಿನ ಪರಿಹಾರ ನಿರೀಕ್ಷೆ ಮಾಡಬಹುದು. ರಾeಕಾಲುವೆ ದುರಸ್ಥಿತಿಯಾದಲ್ಲಿ ಮಾತ್ರ ನೀರು ನುಗ್ಗುವುದನ್ನು ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ, ಪೌರಾಯುಕ್ತ ಪಿ.ಪಾಲಯ್ಯ, ನಗರಸಭೆ ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮಿಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್‍ಗೌಡ, ಸದಸ್ಯರಾದ ಎಂ.ಜೆ.ರಾಘವೇಂದ್ರ, ವಿರೂಪಾಕ್ಷಪ್ಪ, ತಿಪ್ಪಮ್ಮ, ವೆಂಕಟೇಶ್, ಕವಿತಾಬೋರಯ್ಯ, ಸುಜಾತಪ್ರಹ್ಲಾದ್, ನಗರಸಭೆಯ ಸಹಾಯಕ ಇಂಜಿನಿಯರ್ ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕ ದಾದಾಪೀರ್, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮಲೆಕ್ಕಿಗ ಪ್ರಕಾಶ್ ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ಭರಮಣ್ಣ, ಬೋರಯ್ಯ, ಟಿ.ಕೃಷ್ಣಮೂರ್ತಿ, ಅಂಜಿನಪ್ಪ, ಖಾದರ್, ಪ್ರಹ್ಲಾದ್, ಎಂ.ಜೆ.ಕುಮಾರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ