ಗುಬ್ಬಿ:
ದೇಶದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾವಿತ್ರಿಬಾಯಿ ಪುಲೆ ಇಂದಿನ ಮಹಿಳಾ ಶಿಕ್ಷಣ ಕ್ರಾಂತಿಗೆ ಕಾರಣ ?ಭೂತರು.
ಅವರ ಆದರ್ಶ ಮೈಗೂಡಿಸಿಕೊಂಡ ಹೆಣ್ಣು ಮಕ್ಕಳ ಭವಿಷ್ಯ ನಿಜಕ್ಕೂ ಉಜ್ವಲ ಎನಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಯತೀಶ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣದ ಮಹತ್ವ ಅರಿತ ಸಾವಿತ್ರಿಬಾಯಿ ಅವರು ಶತಮಾನಗಳ ಹಿಂದೆಯೇ ಶಿಕ್ಷಣಕ್ಕೆ ಮಹತ್ವ ನೀಡಿ ಕಲಿಕೆಗೆ ಆದ್ಯತೆ ನೀಡಿದ್ದರು ಎಂದು ವಿವರಿಸಿದರು.
ಹಲವು ಅಪಮಾನಗಳನ್ನು ಮೆಟ್ಟಿ ಸಮಾಜಕ್ಕೆ ಶಿಕ್ಷಣ ನೀಡಲು ಮೊದಲು ಹೆಣ್ಣು ಮಕ್ಕಳು ಕಲಿಯಬೇಕು ಎಂಬ ತತ್ವ ಅಂದೇ ಸಾರಿದ್ದರು.
ಹೆಣ್ಣು ಮಕ್ಕಳು ಅಡುಗೆಮನೆಗೆ ಸೀಮಿತ ಎಂಬ ಕಾಲದಲ್ಲಿ ಮನೆಯಿಂದ ಹೊರಬಂದ ಅವರಿಗೆ ಸಗಣ ಯ ಬಹುಮಾನ ನೀಡಿದ್ದರು.
ಆಗ ಮತ್ತೊಮ್ಮೆ ವಸ್ತ್ರ ಬದಲಿಸಿ ಪಾಠ ಮಾಡಲು ತೆರಳಿದ್ದ ದಿಟ್ಟ ಮಹಿಳೆಯ ಕೆಚ್ಚು ಇಂದು ಸಾಕಾರಗೊಳ್ಳುತ್ತಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣ ಗೆ ಬರಲು ಈ ಸಾವಿತ್ರಿಬಾಯಿ ಕಾರಣ ಎಂಬುದು ಮರೆಯುವಂತಿಲ್ಲ ಎಂದರು.
ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮಾತನಾಡಿ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಅನುವು ಮಾಡುತ್ತಿದೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿಗೆ ಅರ್ಥ ಸಿಗುತ್ತಿದೆ. ಮಹಿಳೆ ಇಂದು ಸಮಾಜದ ಮುಖ್ಯವಾಹಿನಿಗೆ ಬಂದಿರಲು ಸಾವಿತ್ರಿಬಾಯಿ ಅವರ ಕೊಡುಗೆ ಸ್ಮರಿಸುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಪ್ರಸಾದ್, ಮಾಜಿ ಅಧ್ಯಕ್ಷ ಜಿ.ಆರ್.ರಮೇಶ್, ಪತ್ರಕರ್ತರಾದ ಆನಂದ್ ದೀಕ್ಷಿತ್, ದೇವರಾಜು, ಮುಖ್ಯ ಶಿಕ್ಷಕಿ ವಸಂತಕುಮಾರಿ, ಶಿಕ್ಷಕರಾದ ಜಯಣ್ಣ, ಭದ್ರೇಗೌಡ ಇತರರು ಇದ್ದರು.
ಗುಬ್ಬಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








