ಮಧುಗಿರಿ :
ಗ್ರಾಮಕ್ಕೆ ಹಾಗೂ ಗ್ರಾಮದ ಜನರಿಗೆ ಒಳಿತಾಗಲೆಂದು ಗ್ರಾಮದ ಎಲ್ಲಾ ಜನರು ಸೇರಿ ಹೊರಬೀಡು ಕಾರ್ಯವನ್ನು ಆಚರಿಸಿದ್ದಾರೆ .ತಾಲೂಕಿನ ಕಸಬಾ ವ್ಯಾಪ್ತಿಯ ಗಂಜಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದಯ್ಯನ ಪಾಳ್ಯ ಗ್ರಾಮದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಹೊರ ಬೀಡು ಕಾರ್ಯಕ್ರಮವನ್ನು ಆಚರಿಸಿ ಕೊಂಡು ಬರುತ್ತಿದ್ದಾರೆ.
ಈ ಆಚರಣೆಯಲ್ಲಿ ಗ್ರಾಮದ ಎಲ್ಲಾ ಸಮುದಾಯದವರು ಸೇರಿ ಗ್ರಾಮವನ್ನು ಸಂಪೂರ್ಣ ವಾಗಿ ಒಂದು ದಿನದ ಮಟ್ಟಿಗೆ ಬೆಳಗಿನ ಜಾವ ಸೂರ್ಯನ ಉದಯಕ್ಕೂ ಮುನ್ನಾ ಒಂದು ದಿನಕ್ಕೆ ಅವಶ್ಯವಾಗಿರುವ ಸಮಾನು ಸರಂಜಾಮುಗಳೊಂದಿಗೆ ಮನೆಗಳನ್ನು ಖಾಲಿ ಮಾಡಿ ಗ್ರಾಮಕ್ಕೆ ಹೋಗುವ ಬರುವ ದಾರಿಗಳನ್ನು ಮುಚ್ಚುತ್ತಾರೆ ಹಾಗೂ ಹೀಗೆ ಮುಚ್ಚಿರುವ ದಾರಿಗಳಲ್ಲಿ ಕೆಲವರನ್ನು ನೇಮಕ ಮಾಡಿ ಯಾರು ಗ್ರಾಮವನ್ನು ಪ್ರವೇಶಿಸದಂತೆ ಕಾವಲುಗಾರರನ್ನು ನೇಮಿಸಿರುತ್ತಾರೆ.
ಈ ಸಂಧರ್ಭದಲ್ಲಿ ಗ್ರಾಮವು ಸಂಪೂರ್ಣವಾಗಿ ಸ್ತಭ್ದ ಗೊಂಡಿರುತ್ತದೆ.ಗ್ರಾಮದ ಸುತ್ತ ಮುತ್ತಲಾ ಜಮೀನುಗಳಲ್ಲಿ ವೃದ್ದರು , ಮಕ್ಕಳು ಎಲ್ಲಾರೂ ಅಲ್ಲಿಯೇ ಸಂಜೆಯ ವರೆವಿಗೂ ಉಳಿದು ಕೊಂಡು ಹೊರ ಬೀಡು ಆಚರಿಸುತ್ತಾರೆ.
ಗ್ರಾಮದ ಹೊರ ಭಾಗದ ಜಮೀನುಗಳಲ್ಲಿರುವ ಗ್ರಾಮಸ್ಥರು ತಮಗೆ ಇಷ್ಟವಾಗುವಂತಹ ಸಸ್ಯ ಹಾರ , ಮಾಂಸಹಾರ , ವಿವಿಧ ರೀತಿಯ ಭಕ್ಷ್ಯ ಭೋಜನಗಳನ್ನು ಅಲ್ಲಿಯೇ ತಯಾರಿಸಿಕೊಂಡು ಹೊರಬೀಡಿನ ಸವಿಯನ್ನು ಸವಿಯುತ್ತಾರೆ.
ನಂತರ ಸೂರ್ಯನ ಮುಳುಗಿದ ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಧೂಳು ಮರಿಯನ್ನು ಬಲಿ ನೀಡಿ ಅದರ ರಕ್ತವನ್ನು ಅನ್ನಕ್ಕೆ ಬೆರಸಿ ಗ್ರಾಮದ ಸುತ್ತ ಮುತ್ತಲೂ ಎರಚಿದ ನಂತರ ಗ್ರಾಮದಲ್ಲಿರುವ ಬಸವಣ್ಣ ದೇವಾಲಯದಲ್ಲಿ ವಿಶೇಷ ವಾಗಿ ಪೂಜೆ ಸಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ಬಂದು ಮನೆಯ ಮುಖ್ಯವದ್ವಾರಕ್ಕೆ ಹಾಗೂ ಮನೆಯ ದೇವರುಗಳಿಗೆ ಪೂಜಿಸುತ್ತಾರೆ. ಹೊರ ಭಾಗದಿಂದ ಬರುವಾಗ ಜನರು ತಾವು ಇದ್ದ ಸ್ಥಳದಲ್ಲಿಯೇ ತಮಗೆ ಇಷ್ಟ ವಾದ ಯಾವುದಾದರೂ ಒಂದು ವಸ್ತುವನ್ನು ಅಲ್ಲಿ ಬಿಟ್ಟು ಬರುವಂತಹ ಸಂಪ್ರಾದಾಯವನ್ನು ಈ ಹೊರ ಬೀಡು ಕಾರ್ಯಕ್ರಮದಲ್ಲಿ ಕಾಣ ಬಹುದಾಗಿದೆ.