15 ಸಾವಿರ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಹಾಸ್ಟಲ್‌ ವಾರ್ಡನ್‌ ….!

ಕಲಬುರಗಿ:

   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಅಡುಗೆ ಸಹಾಯಕರ ಹಾಜರಾತಿಗಾಗಿ 15 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಲೋಕಾಯುಕ್ತರ ಬಲಿಗೆ ಬಿದ್ದಿದ್ದಾರೆ.

    ವಿಶ್ವವಿದ್ಯಾಲಯದ ಮೆಟ್ರಿಕ್ ನಂತರ ಸ್ನಾತಕೋತರ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಗ್ರೂಪ್ (ಡಿ) ಅಡುಗೆ ಸಹಾಯಕರ ಪ್ರತಿ ತಿಂಗಳ ಹಾಜರಾತಿ ನೀಡಲು 20 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದ, ಲಂಚ ನೀಡದಿದ್ದರೆ ಹಾಜರಾತಿ ಮತ್ತು ಸಂಬಳ ಮಾಡಲ್ಲ ಎಂದು ಲಂಚಕ್ಕೆ ಕುಮ್ಮಕ್ಕು ನೀಡುತ್ತಿದ ಎಂದು ತಿಳಿದು ಬಂದಿದೆ. ಇದರಿಂದ ಬೇಸತ್ತು ಅಡುಗೆ ಸಹಾಯಕ ಶ್ರೀಮಂತ ಲೋಕಾಯುಕ್ತರಿಗೆ ದೂರು ನೀಡಿದರು.

   ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಬಿ.ಕೆ. ಉಮೇಶ್ ಮಾರ್ಗದರ್ಶನದ ಡಿವೈಎಸ್ಪಿ ಗೀತಾ ಬೆನಾಳ, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಬಸವರಾಜ್, ಪ್ರದೀಪ್, ಫೈಮುದ್ದಿನ್, ರೇಣುಕಮ್ಮ, ಪೌಡಪ್ಪ, ಸಂತೋಷಮ್ಮ, ಗುಂಡಪ್ಪ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಲಂಚದ ಹಣ ಪಡೆಯುತ್ತಿದ ವಾರ್ಡನ್ ನನ್ನು ವಶಕ್ಕೆ ಪಡೆದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap