ಸಾಹಸ ಪ್ರಿಯರ ಫೇವರಿಟ್‌ ಬಿಎಂಡಬ್ಲ್ಯು R 1300 GS  ಬೈಕ್ ಬಗ್ಗೆ ನಿಮಗೆಷ್ಟು ಗೊತ್ತು….?

ಬೆಂಗಳೂರು: 

    ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ  ತನ್ನ ಹೊಸ ಬಿಎಂಡಬ್ಲ್ಯು R 1300 GS  ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬಿಎಂಡಬ್ಲ್ಯು R 1300 GS ಬೈಕ್ ಬೆಲೆಯು ರೂ. 20.95 ಲಕ್ಷವಾಗಿದೆ. ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್ ಲೈಟ್ ವೈಟ್, ಟ್ರಿಪಲ್ ಬ್ಲಾಕ್, ಜಿಎಸ್ ಟ್ರೋಫಿ ಮತ್ತು ಚಾಯ್ಸ್ 719 ಟ್ರಮುಂಟನಾ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

    ಈ ಹೊಸ ಬಿಎಂಡಬ್ಲ್ಯು R 1300 GS ಬೈಕಿನಲ್ಲಿ 1,300cc, ಅವಳಿ-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,750rpm ನಲ್ಲಿ 143 bhp ಮತ್ತು 6,500rpm ನಲ್ಲಿ 149 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಹಿಂದಿನ ಮಾದರಿಯು 132 bhp ಪವರ್ ಮತ್ತು 143 Nm ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು.

    ಈ ಬೈಕ್ ಟಾಪ್-ಸ್ಪೆಕ್ ಟ್ರಮುಂಟನಾ ರೂಪಾಂತರವು ಆಕ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಮುಂಭಾಗದ ಘರ್ಷಣೆ ಎಚ್ಚರಿಕೆಯಂತಹ ರಾಡಾರ್-ಸಹಾಯದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆದರೆ ಈ ಬೈಕ್ ಅಡಾಪ್ಟಿವ್ ರೈಡ್ ಹೈಟ್ (ARH) ವೈಶಿಷ್ಟ್ಯದೊಂದಿಗೆ ಸಜ್ಜುಗೊಳಿಸಲಾಗುವುದಿಲ್ಲ. ಈ ಬಿಎಂಡಬ್ಲ್ಯು R 1300 GS ಬೈಕ್ ಟ್ರಿಪಲ್ ಬ್ಲ್ಯಾಕ್ ರೂಪಾಂತರವು ARH ಜೊತೆಗೆ ಆಯ್ಕೆ ಮಾಡಬಹುದಾದ ಏಕೈಕ ಮಾದರಿಯಾಗಿದೆ.

    ಎಲ್ಲಾ ಭಾರತೀಯ ರೂಪಾಂತರಗಳು ಅಲಾಯ್ ವ್ಹೀಲ್ ಗಳು ಅಥವಾ ಸ್ಪೋಕ್ಡ್ ರಿಮ್‌ಗಳನ್ನು ನೀಡುವ ಅಂತರರಾಷ್ಟ್ರೀಯ ಆವೃತ್ತಿಗಳಿಗಿಂತ ಭಿನ್ನವಾಗಿ ಕ್ರಾಸ್-ಸ್ಪೋಕ್ಡ್ ಟ್ಯೂಬ್‌ಲೆಸ್ ವ್ಹೀಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಭಾರತೀಯ ರೂಪಾಂತರಗಳು ಕಂಫರ್ಟ್ ಮತ್ತು ಡೈನಾಮಿಕ್ ಪ್ಯಾಕೇಜ್‌ಗಳೊಂದಿಗೆ ಬರುತ್ತವೆ, ಇದರಲ್ಲಿ ಎಲೆಕ್ಟ್ರಾನಿಕ್ ವಿಂಡ್‌ಸ್ಕ್ರೀನ್, ಬೈಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ಸೆಂಟರ್ ಸ್ಟ್ಯಾಂಡ್ ಮತ್ತು ಪ್ರೊ ರೈಡಿಂಗ್ ಮೋಡ್‌ಗಳು ಸೇರಿವೆ.

     ಬೇಸ್ ಲೈಟ್ ವೈಟ್ ಮಾದರಿಯನ್ನು ಹೊರತುಪಡಿಸಿ, ಎಲ್ಲಾ ರೂಪಾಂತರಗಳು ಟೂರಿಂಗ್ ಪ್ಯಾಕೇಜ್ ಅನ್ನು ಒಳಗೊಂಡಿರುತ್ತವೆ. ಅದರಲ್ಲಿ ಪ್ಯಾನಿಯರ್ ಮೌಂಟ್‌ಗಳು, ಕ್ರೋಮ್ಡ್ ಎಕ್ಸಾಸ್ಟ್ ಹೆಡರ್ ಪೈಪ್‌ಗಳು, ಅಡಾಪ್ಟಿವ್ ಹೆಡ್‌ಲೈಟ್, ನಕಲ್-ಗಾರ್ಡ್ ಎಕ್ಸ್‌ಟೆಂಡರ್‌ಗಳು ಮತ್ತು GPS ಸಾಧನದ ಮೌಂಟಿಂಗ್ ಸೇರಿವೆ. ಈ ಬೈಕ್ ಇಕೋ, ರೈನ್, ರೋಡ್ ಮತ್ತು ಎಂಡ್ಯೂರೋ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳಿವೆ.

    ಈ ಬೈಕ್ ರೈಡರ್ ಏಡ್ಸ್ ಮೂಲಕ ಟಾಗಲ್ ಮಾಡಲು ಮತ್ತು ಸ್ಮಾರ್ಟ್‌ಫೋನ್ ಸಂಪರ್ಕ ವೈಶಿಷ್ಟ್ಯವನ್ನು ಬಳಸಲು TFT ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇನ್ನು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಂಡಬ್ಲ್ಯು R 1300 GS ಮಾದರಿಗಿಂತ ಹೊಸ ಬೈಕ್ 40,000 ರೂ. ದುಬಾರಿಯಾಗಿದೆ. ಈ ಬೈಕ್ 19-ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಬೈಕ್ 237 ಕೆಜಿ ತೂಕವನ್ನು ಹೊಂದಿದೆ.

   ಹೊಸ ಬಿಎಂಡಬ್ಲ್ಯು R 1300 GS ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ V4, ಹಾರ್ಲೆ-ಡೇವಿಡ್ಸನ್ ಪ್ಯಾನ್ ಅಮೇರಿಕಾ 1250 ಮತ್ತು ಟ್ರಯಂಫ್ ಟೈಗರ್ 1200 ಜಿಟಿ ಪ್ರೊ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್ ವಿತರಣೆಯು ಇದೇ ತಿಂಗಳು ಪ್ರಾರಂಭವಾಗಲಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap