ಬೆಂಗಳೂರಿನಲ್ಲಿ ಬಿದ್ದ ಮಳೆಯ ಪ್ರಮಾಣ ಎಷ್ಟು ಗೊತ್ತಾ….?

ಬೆಂಗಳೂರು:

    ನಿನ್ನೆ ಮಳೆ ಚಚ್ಚಿ ಬಿಸಾಡಿದೆ, ಮಳೆಯ ಅಬ್ಬರಕ್ಕೆ ಎಲ್ಲವೂ ಅಲ್ಲೋಲ & ಕಲ್ಲೋಲ. ಅದ್ರಲ್ಲೂ ಸಂಜೆ ನಂತರ ಸುರಿದ ಭಾರಿ ಮಳೆಯ ಕಾರಣ ಕರ್ನಾಟಕ ರಾಜಧಾನಿ ಬೆಂಗಳೂರಿನ ಜನರು ನಲುಗಿ ಹೋಗಿದ್ದಾರೆ. ಎಷ್ಟೋ ರಸ್ತೆಗಳಲ್ಲಿ ಭಾರಿ ನೀರು ತುಂಬಿದರೆ, 100ಕ್ಕೂ ಹೆಚ್ಚು ಮರಗಳಿಗೆ ಹಾನಿ ಆಗಿದೆ. ಇದರ ಜೊತೆಗೆ ಬೈಕ್, ಕಾರುಗಳಿಗೆ ಕೂಡ ಭಾರಿ ಹಾನಿ ಉಂಟಾಗಿದೆ.

    ಬೆಂಗಳೂರಿನಲ್ಲಿ 103 ಮಿ.ಮೀ ಮಳೆ ಬರುತ್ತೆ ಎಂಬ ಮುನ್ಸೂಚನೆ ಯಾರಿಗೂ ಇರಲಿಲ್ಲ. ಹೀಗಾಗಿ ನಿನ್ನೆ ಜನರು ತಮ್ಮ ವೀಕೆಂಡ್ ಮಸ್ತಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದರು. ಹೀಗಿದ್ದಾಗ ದಿಢೀರ್ ಅಂತಾ ಮೋಡಗಳು ಆವರಿಸಿ ಬೆಂಗಳೂರಿನಲ್ಲಿ ಮಳೆ ಸುರಿಸಿದವು. ಈ ರೀತಿ ಕಾರ್ಮೋಡಗಳ ಗುಂಪು ಬೆಂಗಳೂರಿಗೆ ಮುತ್ತಿಗೆ ಹಾಕುತ್ತಿದ್ದಂತೆ, ಸಂಜೆ 6 ಗಂಟೆ ಬಳಿಕ ದಿಢೀರ್ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿತ್ತು. ನೋಡ ನೋಡುತ್ತಲೇ ಬೆಂಗಳೂರಿನ ರಸ್ತೆಗಳು ನೀರಿನಿಂದ ತುಂಬಿ ತುಳುಕಿದವು. ಹೀಗೆ ಇಡೀ ಬೆಂಗಳೂರು, ನೀರಿನಲ್ಲಿ ನೆನೆದು ಹೋಯ್ತು. ಅದರಲ್ಲೂ ವಾಹನ ಸವಾರರ ಪಾಡು ಏನಾಗಿತ್ತು ಗೊತ್ತಾ?

    ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿದ ರೀತಿಗೆ ಅಂಡರ್‌ಪಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿ ಮಾಡಿತ್ತು. ಅದರಲ್ಲೂ ಬೆಂಗಳೂರು ಹೃದಯ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿತ್ತು. ಹೀಗೆ ಭಾರಿ ಮಳೆ ಬಿದ್ದ ಸುದ್ದಿ ಗೊತ್ತಾಗದೆ ನೇರವಾಗಿ ರಸ್ತೆಗಳಿಗೆ ಬೈಕ್ & ಕಾರ್‌ನಲ್ಲಿ ಎಂಟ್ರಿ ಕೊಟ್ಟ ಸವಾರರು ರೋಡ್‌ನಲ್ಲಿ ನಿಂತಿದ್ದ ಎದೆ ಎತ್ತರದ ನೀರು ನೋಡಿ ಬೆಚ್ಚಿಬಿದ್ದರು.

   ಇನ್ನೊಂದು ಕಡೆ ಮಳೆಯ ಅಬ್ಬರಕ್ಕೆ ಮರಗಳು ಕೂಡ ಮುರಿದು ಬಿದ್ದವು. ಹೀಗೆ ನೂರಾರು ಮರಗಳಿಗೆ ನಿನ್ನೆ ಬೆಂಗಳೂರಿನಲ್ಲಿ ಭಾರಿ ಹಾನಿ ಆಗಿತ್ತು. ಮರಗಳ ರೆಂಬೆ & ಕೊಂಬೆ ನೇರ ವಾಹನಗಳ ಮೇಲೆ ಬಿದ್ದ ಕಾರಣಕ್ಕೆ ವಾಹನಗಳಿಗೂ ಹಾನಿ ಆಗಿತ್ತು. ಹಾಗೇ ಕಾರ್‌ಗಳ ಮೇಲೆ ಕೂಡ ಮರದ ಪೀಸ್ ಬಿದ್ದ ಕಾರಣಕ್ಕೆ ವಾಹನಗಳ ಮಾಲೀಕರು ಚಿಂತೆಯಲ್ಲಿ ಮುಳುಗಿದ್ದಾರೆ. ಇದು ಸ್ಯಾಂಪಲ್ ಅಷ್ಟೇ, ಮುಂದಿನ ಕೆಲವು ದಿನಗಳ ಕಾಲ ಇದಕ್ಕೂ ಹೆಚ್ಚು ಮಳೆ ನಮ್ಮ ಬೆಂಗಳೂರಿನಲ್ಲಿ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಹಾಗೇ ಹಲವು ಕಂಬಗಳಿಗೂ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ.

    ಮುಂಗಾರು ಮಳೆ ಇಷ್ಟು ಬೇಗ ಕರ್ನಾಟಕಕ್ಕೆ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೂ ಮುಂಗಾರು ಕರ್ನಾಟಕ ಪ್ರವೇಶ ಮಾಡಿ ಅಬ್ಬರಿಸುತ್ತಿದ್ದು, ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಮಳೆಯ ಆಗಮನ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಇನ್ನೂ ಹಲವಾರು ದಿನಗಳ ಕಾಲ ಇದೇ ರೀತಿ, ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಲವು ಪ್ರದೇಶಗಳಿಗೆ ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ & ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap