ದಸರಾ ಗೋಲ್ಡ್‌ ಕಾರ್ಡ್‌ :ಬೆಲೆ ಎಷ್ಟು ….ಮತ್ತು ಪಡೆಯುವುದು ಹೇಗೆ…..?

ಮೈಸೂರು

     ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರ ಟಿಕೆಟ್​ ಮಾರಾಟ ಶನಿವಾರದಿಂದ (ಸೆ.28) ಆರಂಭವಾಗಲಿದೆ. ಎರಡು ರೀತಿಯ ಟಿಕೆಟ್​ಗಳಿವೆ. ಗೋಲ್ಡ್​ ಕಾರ್ಡ್​  ಮತ್ತು ಸಾಮಾನ್ಯ ಟಿಕೆಟ್​​. ಈ ಎರಡನ್ನು ಆನ್​ಲೈನ್ ಮೂಲಕ ಕೊಂಡುಕೊಳ್ಳಬಹುದಾಗಿದೆ. ಸೆಪ್ಟೆಂಬರ್​ 30ರವರೆಗೆ ಮಾತ್ರ ಗೋಲ್ಡ್​ ಕಾರ್ಡ್​ ಮತ್ತು ಟಿಕೆಟ್ ​ಮಾರಾಟ ಮಾಡಲಾಗುತ್ತದೆ ಎಂದು ದಸರಾ ವಿಶೇಷ ಅಧಿಕಾರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದರು. 

    ದಸರಾ ಮತ್ತು ಯುವ ದಸರಾಗೆ ಟಿಕೆಟ್​ ಮಾರಾಟ ಸೆ.28ರಿಂದ ಆರಂಭವಾಗಲಿದೆ. ಪ್ರತಿನಿತ್ಯ 1 ಸಾವಿರದಿಂದ 1500 ಗೋಲ್ಡ್ ಕಾರ್ಡ್​ಗಳನ್ನು ಮರಾಟ ಮಾಡಲಾಗುತ್ತದೆ. ಒಂದು ದಸರಾ ಗೋಲ್ಡ್ ಕಾರ್ಡ್​ಗೆ 6,500 ರೂಪಾಯಿ ನಿಗದಿ ಮಾಡಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್​ನಲ್ಲಿ ಜಂಬೂಸವಾರಿ ಮೆರವಣಿಗೆ, ಪಂಜಿ‌ನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.  ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 3,500 ರೂ. ಬೆಲೆಯ ಟಿಕೆಟ್​ ಲಭ್ಯವಿದೆ. ಇನ್ನು, ಕೇವಲ ಪಂಜಿನ ಕವಾಯತು ವೀಕ್ಷಣೆಗೆ 1,000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

  • ಮೈಸೂರು ದಸರಾ ಅಧಿಕೃತ ವೆಬ್​ಸೈಟ್ https://www.mysoredasara.gov.in ಗೆ ಭೇಟಿ ನೀಡಿ.
  • ಹೋಮ್​ ಪೇಜ್​ನಲ್ಲಿ ಟಿಕೆಟ್​ಗಳು ಮತ್ತು ಲೈವ್​ ಅಂತ ಕಾಣುತ್ತದೆ.
  • ಅದರ ಮೇಲೆ ಕ್ಲಿಕ್​ ಮಾಡಿದ ನಂತರ ಆಯ್ಕೆ ಕೇಳುತ್ತದೆ.
  • ಟಿಕೆಟ್​ ಬುಕ್ಕಿಂಗ್​ ಮೇಲೆ ಕ್ಲಿಕ್​ ಮಾಡಿ.
  • ನಂತರ ಟಿಕೆಟ್​ ಬುಕ್ಕಿಂಗ್​ ಪೇಜ್​ ತೆರಯುತ್ತದೆ
  • ಕೆಳಗಡೆ ಬಂದರೆ ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಪಂಜಿನ ಕವಾಯಿತು ಬನ್ನಿಮಂಟಪ, ದಸರಾ 2024 ಜಂಬೂ ಸವಾರಿ ದರ ಸಮೇತ ಆಯ್ಕೆ ತೋರಿಸಲಾಗಿರುತ್ತದೆ.
  • ಬಳಿಕ, ಟಿಕೆಟ್​ ಖರೀದಿ ಎಂಬುವುದರ ಮೇಲೆ ಕ್ಲಿಕ್​ ಮಾಡಿ, ಮತ್ತೊಂದು ಪೇಜ್​ ತೆರೆಯುತ್ತದೆ. ಅಲ್ಲಿ ಎಷ್ಟು ಟಿಕೆಟ್​ ಅಂತ ಕ್ಲಿಕ್​ ಮಾಡಿ. ನಂತರ buy tickets ಮೇಲೆ ಕ್ಲಿಕ್​ ಮಾಡಿ. ನಿಮ್ಮ ಸಂಪೂರ್ಣ ಮಾಹಿತಿ ದಾಖಲಿಸಿ, ಹಣ ಪಾವತಿಸಿ ಟಿಕೆಟ್​ ಖರೀದಿಸಿ. 

    ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಿದೆ. ಬೆಳಗ್ಗೆ 7.30ಕ್ಕೆ ನವಗ್ರಹ ಹೋಮ ಶಾಂತಿ ಪೂಜೆ ಮೂಲಕ ಸಿಂಹಾಸನ ಜೋಡಣಾ ಕಾರ್ಯ ಶುರುವಾಯಿತು. ಅರಮನೆ ದರ್ಬಾರ್ ಹಾಲ್​ನಲ್ಲಿ ಬೆಳಗ್ಗೆ 9.55 ರಿಂದ 10.25ರೊಳಗೆ ರತ್ನಖಚಿತ ಸಿಂಹಾಸನ ಜೋಡಿಸಲಾಗಿದೆ.  ಅಕ್ಟೋಬರ್​ 3ರಿಂದ ಯದುವೀರ್ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ.  ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಅರಮನೆ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

Recent Articles

spot_img

Related Stories

Share via
Copy link