ತುಮಕೂರು:
ಹೆಣ್ಮಕ್ಕಳು ದುಡ್ಡಿನ ವಿಷ್ಯದಲ್ಲಿ ಗಂಡಂದಿರನ್ನು ಯಾಮಾರಿಸುತ್ತಾರೆ. ತಿಂಗಳ ಖರ್ಚು ವೆಚ್ಚಗಳ ಲೆಕ್ಕ ಸರಿಯಾಗಿ ಕೊಡದೇ ಸ್ವಲ್ಪವೇ ಹಣವನ್ನು ಕೂಡಿಟ್ಟು, ಕಷ್ಟದ ಕಾಲದಲ್ಲಿ ಅದನ್ನು ಬಳಸಿಕೊಳ್ಳುತ್ತಾರೆ. ಈ ರೀತಿ ಮಾಡುವುದು ಒಂದರ್ಥದಲ್ಲಿ ಒಳ್ಳೆಯದೇ. ಹೀಗಾಗಿ ಹೆಚ್ಚಿನವರು ಗಂಡನ ಜೇಬಲ್ಲಿರುವ ದುಡ್ಡಲ್ಲಿ ನೂರೋ ಇನ್ನೂರೋ ರೂಪಾಯಿ ಎತ್ತಿಟ್ಟು ಯಾಮಾರಿಸುವುದನ್ನು ನೋಡಿರಬಹುದು. ಈ ರೀತಿಯಾದಾಗ ಗಂಡನ ಕೈಯಲ್ಲಿ ಯಾವಾಗಲಾದರೂ ಒಮ್ಮೆ ಸಿಕ್ಕಿ ಬೀಳುವುದಿದೆ. ನಿಮ್ಗೆ ಏನಾದ್ರು ಇಂತಹ ಕಠಿಣ ಸಂದರ್ಭ ಎದುರಾದ್ರೆ ಹೀಗೆ ಮಾಡಿ ಎಂದು ಮಹಿಳೆಯೊಬ್ಬರು ಸಲಹೆ ನೀಡಿ, ಏನೆಲ್ಲಾ ಮಾಡಬಹುದು ಎಂದು ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
kanchansharmaranjan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಗಂಡನ ಜೇಬಿನಿಂದ ಹಣ ತೆಗೆದು ಸಿಕ್ಕಿ ಬಿದ್ದಾಗ ಯಾವ ರೀತಿ ಪಾರಾಗುವುದು ಎಂದು ಹೇಳಿದ್ದಾರೆ. ಗಂಡನ ಜೇಬು ಹೆಂಡತಿ ಪಾಲಿಗೆ ನಿಧಿಯಿದ್ದಂತೆ. ಕಷ್ಟದ ಕಾಲದಲ್ಲಿ ಅಥವಾ ಅಗತ್ಯವಿದ್ದಾಗ ಗಂಡನ ಜೇಬಿಗೆ ಮಹಿಳೆಯರು ಕೈ ಹಾಕುತ್ತಾರೆ. ಕೆಲವರು ಸಿಕ್ಕಿ ಬೀಳುತ್ತಾರೆ ಕೂಡ. ಈ ವೇಳೆಯಲ್ಲಿ ನಿಮಗೆ ಏನು ತಿಳಿಯದ್ದಂತೆ ನಾಟಕ ಮಾಡಿ, ಆ ವೇಳೆ ವಾತಾವರಣವು ತಿಳಿಯಾಗುತ್ತದೆ ನಿಮ್ಮ ಗಂಡನಿಗೆ ಯಾವುದೇ ಅನುಮಾನ ಬರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
