ಹುಬ್ಬಳ್ಳಿ:
ಹುಬ್ಬಳ್ಳಿ-ರಾಮೇಶ್ವರಂ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ (07355/07356) ರೈಲಿನ ಸಂಚಾರ ಅವಧಿ ವಿಸ್ತರಣೆಯನ್ನು ರೈಲ್ವೆ ಮಂಡಳಿ ಮಾಡಿದ್ದು, ಪರಿಷ್ಕೃತ ವಿಸ್ತರಣೆ ರಾಮನಾಥಪುರಂವರೆಗೆ ಮಾತ್ರ ಇರಲಿದೆ. ಈ ರೈಲು ಇನ್ನು ಮುಂದೆ ರಾಮೇಶ್ವರದ ಬದಲಿಗೆ ರಾಮನಾಥಪುರಂವರೆಗೆ ಮಾತ್ರ ಇರಲಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ಈ ಪರಿಷ್ಕೃತ ಸೇವೆ 2025 ಜುಲೈ 5 ರಿಂದ 26ರವರೆಗೆ ಜಾರಿಯಲ್ಲಿರುತ್ತದೆ. ಇದರ ಜೋಡಿ ರೈಲು, 07356 ಸಂಖ್ಯೆಯ ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲು, ರಾಮೇಶ್ವರಂ ಬದಲಿಗೆ ರಾಮನಾಥಪುರಂನಿಂದ 2025 ಜುಲೈ 6 ರಿಂದ 27ರವರೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ ಎಂದು ತಿಳಿಸಲಾಗಿದೆ.
ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 06:50ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:00ಕ್ಕೆ ರಾಮನಾಥಪುರಂ ತಲುಪಲಿದೆ. ವಾಪಸಾತಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07356 ರಾಮನಾಥಪುರಂನಿಂದ ರಾತ್ರಿ 22:00ಕ್ಕೆ ಹೊರಟು, ಮರುದಿನ ಸಂಜೆ 19:40ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ. ಈ ರೈಲುಗಳು ತಮ್ಮ ಹಿಂದಿನ ಎಲ್ಲಾ ನಿಗದಿತ ನಿಲುಗಡೆ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಹಿಂದಿನ ಸೂಚನೆಯ ಪ್ರಕಾರ, ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (07355) ರೈಲು ಜೂನ್ 28, 2025 ರವರೆಗೆ ಮತ್ತು ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (07356) ರೈಲು ಜೂನ್ 29, 2025 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಈ ಸೇವೆಗಳು ಆಯಾ ದಿನಾಂಕಗಳವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಮೂಲ ಯೋಜನೆಯಂತೆ ಕಾರ್ಯನಿರ್ವಹಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
