ತುಮಕೂರಿನಲ್ಲಿ ಐ ಟಿ ದಾಳಿ : ಬೃಹತ್‌ ಪ್ರಮಾಣದ ಹಣ ವಶ….!

ತುಮಕೂರು 

    ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಐಟಿ ಇಲಾಖೆ ಅಧಿಕಾರಿಗಳು ಚುನಾವಣಾ ಅಧಿಕಾರಿಗಳು, ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಇಂದು ತುಮಕೂರಿನಲ್ಲಿ ಭರ್ಜರಿ ದಾಳಿ ನಡೆಸುವ ಮೂಲಕ ಅಕ್ರಮವಾಗಿ ಮನೆಯಲ್ಲಿ ಶೇಖರಣೆ ಮಾಡಿದ ಹಣ ಹಾಗೂ ಧಾಖಲಾತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.

    ತುಮಕೂರಿನ ಬಿ ಎಚ್ ರಸ್ತೆಯಲ್ಲಿ ಇರುವ ಮನೋಜ್ ಟೈಂ ಝೋನ್, ಸೆಲ್ಲೂಲರ್ ಪಾಯಿಂಟ್ ಮೊಬೈಲ್ ಅಂಗಡಿ ಹಾಗೂ ತುಮಕೂರಿನ ಗಾಂಧಿನಗರದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಕಟ್ಟಡವನ್ನು ಸಂಪೂರ್ಣ ಜಾಲಾಡಿರುವ ಅಧಿಕಾರಿಗಳು ಐ.ಟಿ ದಾಳಿಗೆ ಒಳಗಾದ ಯುವ ಉದ್ಯಮಿಗಳಿಗೆ ಬೃಹತ್ ಶಾಕ್ ನೀಡಿದ್ದಾರೆ.

    ಬೆಂಗಳೂರಿನಿಂದ 3ಕ್ಕೂ ಹೆಚ್ಚು ವಾಹನದಲ್ಲಿ ಆಗಮಿಸಿದ 8ಕ್ಕೂ ಹೆಚ್ಚು ಅಧಿಕಾರಿಗಳ ತಂಡ ತಮ್ಮ ಸಿಬ್ಬಂದಿಗಳೊಂದಿಗೆ ಮನೆಯ ಮೇಲೆ ದಾಳಿ ನಡೆಸಿದ್ದಾರೆ.ಸತತ 9 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳಿಂದ ಮನೆಯ ಮೊಬೈಲ್ ಅಂಗಡಿ, ವಾಚ್ ಅಂಗಡಿ ,ಇಂಚಿಂಚು ಬಿಡದೆ ತಪಾಸಣೆ ಮಾಡಲಾಗಿದ್ದು ತನಿಖೆಯ ನಂತರ ಮನೆಯಿಂದ ಹಲವು ದಾಖಲಾತಿಗಳು ಹಾಗೂ ಬ್ಯಾಗ್ ನಲ್ಲಿ ಬೃಹತ್ ಪ್ರಮಾಣದ ಹಣವನ್ನು ಅಧಿಕಾರಿಗಳ ತಮ್ಮ ಕಾರಿನಲ್ಲಿ ಕೊಂಡೊಯ್ದಿದ್ದಾರೆ ಎನ್ನಲಾಗಿದೆ ಮನೆಯಲ್ಲಿ ವಶಕ್ಕೆ ಪಡೆದಿರುವ ಹಣದ ಮೌಲ್ಯ ಎಷ್ಟು ಎನ್ನುವ ಮಾಹಿತಿ ತನಿಖೆಯ ನಂತರ ಅಧಿಕಾರಿಗಳಿಂದ ಲಭ್ಯವಾಗಲಿದೆ ಎನ್ನಲಾಗಿದೆ .

ಕೋಟ್ಯಂತರ ರೂಪಾಯಿ ಮೌಲ್ಯದ ಹಣ ವಶ…..???

   ಐ.ಟಿ ಅಧಿಕಾರಿಗಳು ಗಾಂಧಿನಗರದ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಂತೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು ದಾಳಿ ನಡೆಸಿದ ನಿವಾಸದಿಂದ ಬೃಹತ್ ಪ್ರಮಾಣದ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವ ವಿಷಯ ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿತ್ತು.

ಐ ಟಿ ದಾಳಿ ಬೆನ್ನಲ್ಲೇ ಎಚ್ಚೆತ್ತು ಚಾಣಾಕ್ಷತನ ಮೆರೆದ ಯುವ ಉದ್ಯಮಿಗಳು…..????

     ಒಂದೆಡೆ ಗಾಂಧಿನಗರದ ನಿವಾಸದ ಮೇಲೆ ಬೃಹತ್ ಪ್ರಮಾಣದ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ದಾಳಿಯ ಸೂಕ್ಷ್ಮವನ್ನು ಅರಿತ ಅಂಗಡಿ ಮಾಲಿಕ ತನ್ನ ಮತ್ತೊಂದು ಕಾರಿನಲ್ಲಿ ತನ್ನ ಮೊಬೈಲ್ ಅಂಗಡಿ ಇಂದ ನಾಲ್ಕು ಬೃಹತ್ ಬಾಕ್ಸ್ ಗಳಲ್ಲಿ ಮೊಬೈಲ್ಗಳು ಹಾಗೂ ಹಣವನ್ನು ತನ್ನ ಅಂಗಡಿಯಿಂದ ಸಿಯಜ್ ಕಾರಿನಲ್ಲಿ ಸಾಗಿಸುವಲ್ಲಿ ಸಫಲರಾಗಿದ್ದಾರೆ ಎನ್ನುವ ಮಾಹಿತಿ ಸಹ ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿತ್ತು.

ಐ. ಟಿ ದಾಳಿ ಬೆನ್ನಲ್ಲೇ ಬಿಜೆಪಿ ಬಾವುಟ ತರವು

    ಐಟಿ ಅಧಿಕಾರಿಗಳ ದಾಳಿ ಬೆನ್ನಲ್ಲೇ ದಾಳಿಗೊಳಗಾದ ಉ ದ್ಯಮಿ ತಾವು ನಿರ್ಮಿಸುತ್ತಿರುವ ನೂತನ ಕಟ್ಟಡದ ಮೇಲೆ ಕಟ್ಟಿದ್ದ ಬಿಜೆಪಿ ಬಾವುಟವನ್ನು ತೆರವುಗೊಳಿಸಿದ್ದು  ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap