ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್​ಕೆ ಸಜ್ಜು?

 ಐಪಿಎಲ್ 2022ರ ಮೊದಲ ಮೂರೂ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡು ಕಳಪೆ ಪ್ರದರ್ಶನ ತೋರಿದೆ. ಇದರಿಂದ ಚೆನ್ನೈ ತಂಡದಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬುದು ಕುತೂಹಲ ಮೂಡಿಸಿದೆ.ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್  ತಂಡ ಹಿಂದೆಂದೂ ಅನುಭವಿಸದ ಮುಖಭಂಗಕ್ಕೆ ಒಳಗಾಗಿದೆ.

ಐಪಿಎಲ್​ ಸಿಎಸ್​ಕೆ ನಲ್ಲಿಇದುವರೆಗೆ ಆಡಿದ ಮೊದಲ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಸೋತು ಇತಿಹಾಸವೆ ಇರಲಿಲ್ಲ. ಆದರೀಗ ಐಪಿಎಲ್ 2022ರ (IPL 2022) ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಂಡು ಕಳಪೆ ಪ್ರದರ್ಶನ ತೋರಿದೆ. ಇದರಿಂದ ಚೆನ್ನೈ ತಂಡದಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬುದು ಕುತೂಹಲ ಮೂಡಿಸಿದೆ.

ಅಂದರೆ ರವೀಂದ್ರ ಜಡೇಜಾ ನಾಯಕತ್ವ ತ್ಯಜಿಸಿ ಮತ್ತೆ ಎಂಎಸ್ ಧೋನಿಯೇ (MS Dhoni) ಕ್ಯಾಪ್ಟನ್ ಪಟ್ಟಕ್ಕೆ ಬರುತ್ತಾರ ಎಂಬ ಅನುಮಾನ ಶುರುವಾಗಿದೆ. ಅಲ್ಲದೆ ಅಭಿಮಾನಿಗಳು ಕೂಡ ಧೋನಿಯೇ ಪುನಃ ಕ್ಯಾಪ್ಟನ್ ಆಗಲಿ ಎಂದು ಅಭಿಯಾನ ಶುರು ಮಾಡುತ್ತಿದ್ದಾರೆ. ಇದರ ನಡುವೆ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಅವರನ್ನಾದರು ಕರೆಸಿಕೊಳ್ಳಿ ಎಂದು ಟ್ವಿಟರ್​​ನಲ್ಲಿ ದೊಟ್ಟ ಮಟ್ಟದ ಚರ್ಚೆ ಶುರುವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ (CSK vs PBKS) ನೀಡಿದ ಅತ್ಯಂತ ಕಳಪೆ ಪ್ರದರ್ಶನ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಆಲೌಟ್ ಆಗಿದ್ದು ತೀರಾ ಕಡಿಮೆ. ಅಲ್ಲದೆ ಚೇಸಿಂಗ್​ನಲ್ಲಿ ಸೂತಿದ್ದುಕೂಡ ಅಪರೂಪ. ಹೀಗಿರುವಾಗ ಸಿಎಸ್​​ಕೆ ಪಂಜಾಬ್ ವಿರುದ್ಧ ಕೇವಲ 126 ರನ್​​ಗೆ ಸರ್ವಪತನ ಕಂಡು ದೊಡ್ಡ ಅಂತರದಲ್ಲಿ ಸೋಲುಂಡಿದೆ. ಪಾಯಿಂಟ್ ಟೇಬಲ್​ನಲ್ಲಂತು ಪಾತಾಳಕ್ಕೆ ಕುಸಿದಿದೆ. ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂದುಕೊಂಡಂತೆ ಸಿಎಸ್​ಕೆ ಬೌಲರ್​​ಗಳ ಆರಂಭ ಉತ್ತಮವಾಗಿಯೇ ಇತ್ತು. ಆದರೆ, ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಲಿವಿಂಗ್​ಸ್ಟೋನ್.

ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಮೊದಲ ಓವರ್‌ನಲ್ಲೇ ಮುಕೇಶ್ ಚೌಧರಿಗೆ ವಿಕೆಟ್ ಒಪ್ಪಿಸಿದರೆ, ಎರಡನೇ ಓವರ್‌ನಲ್ಲಿ ಧೋನಿಯ ಮಿಂಚಿನ ಸ್ಟಂಪಿಂಗ್‌ಗೆ ಅಪಾಯಕಾರಿ ಬ್ಯಾಟರ್ ಭಾನುಕ ರಾಜಪಕ್ಷೆ ರನೌಟ್ ಆದರು. ಜಡೇಜಾ ಪಡೆ ಮೊದಲ ಎರಡು ಓವರ್​​ನಲ್ಲಿ ಮಾತ್ರ ಮೇಲುಗೈ ಸಾಧಿಸಿತು.

ನಂತರ ಶುರುವಾಗಿದ್ದು ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಶಿಖರ್ ಧವನ್ ಅವರ ಭರ್ಜರಿ ಆಟ. ಹಿಂದಿನ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಲಿವಿಂಗ್‌ಸ್ಟೋನ್ ಈ ಬಾರಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಧವನ್ ಇವರಿಗೆ ಉತ್ತಮ ಸಾಥ್ ಕೂಡ ಕೊಟ್ಟರು. ಈ ಜೋಡಿ ಶತಕದ ಜೊತೆಯಾಟ ಆಡುವ ಮೂಲಕ ಕುಸಿದ ತಂಡಕ್ಕೆ ಆಧಾರವಾದರು.

ಧವನ್ 24 ಎಸೆತಗಳಲ್ಲಿ 33 ರನ್‌ಗಳಿಸಿ ಔಟಾದರೆ, ಲಿವಿಂಗ್‌ಸ್ಟೋನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 32 ಎಸೆತಗಳಲ್ಲಿ 60 ರನ್ ಸಿಡಿಸಿದ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಅದರಲ್ಲೂ ಐಪಿಎಲ್ 2022ರ ಸೀಸನ್‌ನಲ್ಲಿಯೇ ಅತಿ ದೊಡ್ಡದಾದ (108m) ಸಿಕ್ಸರ್ ಸಿಡಿಸಿ ಮಿಂಚಿದರು.

ಧವನ್ ಮತ್ತು ಲಿವಿಂಗ್‌ಸ್ಟೋನ್ ವಿಕೆಟ್ ಪತನದ ಬಳಿಕ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಜಿತೇಶ್ ಶರ್ಮಾ 26 ರನ್‌ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಅಂತಿಮವಾಗಿ ಪಂಜಾಬ್‌ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು.

ಗುರಿ ಬೆನ್ನತ್ತಿದ ಚೆನ್ನೈ ಚೇಸಿಂಗ್ ಉತ್ತಮವಾಗಿರಲಿಲ್ಲ. 7.3 ಓವರ್‌ಗಳಲ್ಲಿ 36 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಬಿನ್ ಉತ್ತಪ್ಪ (13), ಋತುರಾಜ್ ಗಾಯಕವಾಡ್ (1), ಮೊಯಿನ್ ಅಲಿ (0), ಅಂಬಟಿ ರಾಯುಡು (13) ಹಾಗೂ ನಾಯಕ ರವೀಂದ್ರ ಜಡೇಜ (0) ನಿರಾಸೆ ಮೂಡಿಸಿದರು.

ತುಮಕೂರಿನಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತ : 10 ಕ್ಕೂ ಹೆಚ್ಚು ಜನರಿಗೆ ಗಾಯ

 

ಅಂತಿಮ 10 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 128 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಧೋನಿ ಜೊತೆಗೂಡಿದ ಶಿವಂ ದುಬೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಿರುಗೇಟು ನೀಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಧೋನಿ ಆಟ 23 ರನ್​ಗೆ ಅಂತ್ಯವಾದಾಗ ಚೆನ್ನೈ ಸೋಲು ಖಚಿತವಾಯಿತು. ಅಂತಿಮವಾಗಿ ಸಿಎಸ್​​ಕೆ 18 ಓವರ್​​ಗಳಲ್ಲಿ 126 ರನ್​​ಗೆ ಆಲೌಟ್ ಆಯಿತು. ಪಂಜಾಬ್ ಪರ ವೈಭವ್ ಅರೋರಾ ಎರಡು ವಿಕೆಟ್ ಕಿತ್ತು ಮಿಂಚಿದರು. ರಾಹುಲ್ ಚಾಹರ್ ಮೂರು ಹಾಗೂ ಲಿವಿಂಗ್‌ಸ್ಟೋನ್ ಎರಡು ವಿಕೆಟ್ ಕಬಳಿಸಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap