ಬಿಜೆಪಿ ಮುಖಂಡನಿಂದ ಭಾರಿ ವಂಚನೆ? ಡೆತ್‌ನೋಟ್‌ ಬರೆದಿಟ್ಟು ಮೈಸೂರು ಉದ್ಯಮಿ ಆತ್ಮಹತ್ಯೆ

ಮೈಸೂರು : 

ಬಿಜೆಪಿ ಮುಖಂಡ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಡೆತ್‌ನೋಟ್‌ನಲ್ಲಿ ಅಣ್ಣಪ್ಪನ ಹೆಸರು ಬರೆದು ಉದ್ಯಮಿ ಶರತ್‌ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಏಪ್ರಿಲ್ 18 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಶರತ್‌ ಅವರು ಮೈಸೂರಿನ ಗಣೇಶ ನಗರದ ನಿವಾಸಿ. ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಅಪ್ಪಣ್ಣ ಹಾಗೂ ಪ್ರವೀಣ್ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆ

ಅಣ್ಣಪ್ಪನವರು ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ನ ಅಧ್ಯಕ್ಷರಾಗಿದ್ದು, ಎಚ್.ಡಿ ಕೋಟೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇವರು ಉದ್ಯಮಿ ಶರತ್‌ ಅವರಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಾಲವನ್ನು ವಾಪಸ್‌ ಕೊಟ್ಟಿರಲಿಲ್ಲ. ಪ್ರವೀಣ್‌ ಎಂಬಾತ ಕೂಡ ಇವರಿಗೆ ಪಾಲುದಾರಿಕೆಯಲ್ಲಿ ವಂಚನೆ ಮಾಡಿದ್ದ. ಒಂದೆಡೆ ಪಾಲುದಾರಿಕೆಯಲ್ಲಿ ವಂಚನೆ, ಮತ್ತೊಂದೆಡೆ ಸಾಲ ಪಡೆದ ಅಪ್ಪಣ್ಣನಿಂದಲೂ ವಂಚನೆ. ಇದರಿಂದ ಬೇಸತ್ತು ಶರತ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯಪುರ ಮತ್ತು ಪಾವಗಡದಲ್ಲಿ ಆಜಾನ್ ವಿರುದ್ಧ ಭಜನ್ ಅಭಿಯಾನ

ಪ್ರವೀಣ್ ನಡೆಸುತ್ತಿದ್ದ ಸ್ವದೇಶಿ ಎಂಬ ಸೋಲಾರ್ ಮತ್ತು ಯುಪಿಎಸ್ ಹಾಗೂ ಮನೆಯ ಇಂಟಿರಿಯರ್ಸ್ ಕಂಪನಿಯಲ್ಲಿ
ಶರತ್‌ ಪಾಲುದಾರನಾಗಿದ್ದ. ಪ್ರವೀಣ್‌ ಶೇಕಡಾ 50% ರಷ್ಟು ಪಾಲುದಾರಿಕೆ ಮಾಡಿಕೊಂಡಿದ್ದ. ನಂತರ ಉದ್ಯಮದಲ್ಲಿ ಪಾರ್ಟನ್‌ಶಿಪ್‌ನಿಂದ ಶರತ್‌ನನ್ನ ತೆಗೆದು ಹಾಕಿ, 50 % ಹಣ ವಾಪಸ್ ನೀಡದೇ ವಂಚಿಸಿದ್ದ. ಈ ಮಧ್ಯೆ ಶರತ್‌ನಿಂದ ಅಣ್ಣಪ್ಪ ಎಂಟು ಲಕ್ಷ ರೂ. ಸಾಲ ಪಡೆದಿದ್ದ ಅಪ್ಪಣ್ಣ.

ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ

ಇದರಿಂದ ನೊಂದಿದ್ದ ಶರತ್‌ ಆಗಾಗ ಪತ್ನಿ ಕೃಪಾಲಿನಿ ಬಳಿ ನೋವನ್ನ ಹೇಳಿಕೊಳ್ಳುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ಪ್ರವೀಣ್ ಹಾಗೂ ಅಪ್ಪಣ್ಣ ಹೆಸರನ್ನು ಅವರು ಉಲ್ಲೇಖಿಸಿದ್ದು, ಇವರಿಬ್ಬರ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಡೆತ್‌ನೋಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್.ಆರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶರತ್ ಪತ್ನಿ ಕೃಪಾಲಿನಿ ದೂರು ದಾಖಲಿಸಿದ್ದಾರೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap