ಕಣ್ಣಿನಲ್ಲಿತ್ತು 10 ಸೆಂ.ಮೀ ಉದ್ದದ ಹುಳು, ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

ಮುಂಬೈ

    ವ್ಯಕ್ತಿಯ ಕಣ್ಣಿನಲ್ಲಿದ್ದ 10 ಸೆಂ.ಮೀ ಉದ್ದದ ಹುಳುವನ್ನು ವೈದ್ಯರು ಶಸ್ತ್ರ ಚಿಕಿತ್ಸೆ(Surgery) ಮೂಲಕ ಹೊರ ತೆಗೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ಮೂಲದ ನೇತ್ರ ತಜ್ಞ ದೇವಾಂಶಿ ಶಾ ಅವರು 60 ವರ್ಷದ ವ್ಯಕ್ತಿಯ ಕಣ್ಣಿನಲ್ಲಿದ್ದ ಹುಳುವನ್ನು ಹೊರ ತೆಗೆದಿದ್ದಾರೆ, ಇದು ಸವಾಲಿನ ಶಸ್ತ್ರ ಚಿಕಿತ್ಸೆಯಾಗಿತ್ತು ಎಂದು ಹೇಳಿದ್ದಾರೆ.

   ಒಂದೊಮ್ಮೆ ಆ ವ್ಯಕ್ತಿಯ ಕಣ್ಣಿನಿಂದ ಹುಳು ತೆಗೆಯದಿದ್ದರೆ ಅದು ಜೀವಕ್ಕೆ ಅಪಾಯವನ್ನುಂಟುಮಾಡುತ್ತಿತ್ತು. ಮುಂಬೈ ನಿವಾಸಿಯಾಗಿರುವ ಶಿವಕುಮಾರ್ ಅವರ ಕಣ್ಣಲ್ಲಿ ಏನೋ ಚುಚ್ಚುತ್ತಿರುವ ಅನುಭವವಾಗುತ್ತಿತ್ತು. ಡಾ. ದೇವಾಂಶಿ ಷಾ ಅವರನ್ನು ಸಂಪರ್ಕಿಸಿದರು, ಅವರ ಕಣ್ಣಿನಲ್ಲಿ 10 ಸೆಂ.ಮೀ ಉದ್ದದ ಹುಳುವನ್ನು ನೋಡಿ ಅವರು ಆಘಾತಕ್ಕೊಳಗಾದರು. ಅದು ವ್ಯಕ್ತಿಯ ದೇಹವನ್ನು ಪ್ರವೇಶಿಸಿ ಅವರ ಕಣ್ಣನ್ನು ತಲುಪಿರಬೇಕು ಎಂದು ವೈದ್ಯರು ಹೇಳಿದರು.

   ಹುಳು ಅವನ ಹೃದಯಕ್ಕೆ ಹೋಗಿದ್ದರೆ ಹೃದಯಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು, ಹುಳು ಅವನ ಮೆದುಳನ್ನು ತಲುಪಿದ್ದರೆ ಅದು ಮಾರಕವೂ ಆಗಿರಬಹುದು ಎಂದು ಡಾ. ಶಾ ಹೇಳಿದ್ದಾರೆ. ಮೊದಲಿಗೆ ಶಿವಕುಮಾರ್ ಅವರ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡಾಗ, ಅದು ಸಾಮಾನ್ಯ ನೋವು ಎಂದು ಅವರು ಭಾವಿಸಿದ್ದರು. ಆದರೆ ನೋವು ತೀವ್ರಗೊಂಡಂತೆ ವೈದ್ಯರನ್ನು ಸಂಪರ್ಕಿಸಿದಾಗ, ಶಿವಕುಮಾರ್ ಮತ್ತು ಅವರ ಮಗ ಸುನಿಲ್ ಅವರ ಕಣ್ಣಿನಲ್ಲಿ ಜೀವಂತ ಹುಳು ಕಂಡುಬಂದ ನಂತರ ಚಿಂತೆಗೊಳಗಾಗಿದ್ದರು. 

   ಬೆಳಗ್ಗೆ ಇದ್ದಕ್ಕಿದ್ದಂತೆ ನೋವು ಹೆಚ್ಚಾಗಿತ್ತು, ಬಳಿಕ ಕಣ್ಣಿನಲ್ಲಿ ಧೂಳೇನಾದರು ಇದ್ದರೆ ಹೋಗಲಿ ಎಂದು ಕಣ್ಣಿನ ಡ್ರಾಪ್ಸ್​ಬಿಟ್ಟು ಮಲಗಿದೆ. ಸ್ವಲ್ಪ ಸಮಯದ ಬಳಿಕ ಕಣ್ಣಿನಲ್ಲಿ ರಕ್ತಸ್ರಾವವಾಗಲು ಶುರುವಾಗಿತ್ತು.ಕೂಡಲೇ ಡಾ. ಶಾ ಅವರನ್ನು ಭೇಟಿ ಮಾಡಿದ್ದೇನೆ. ಏತನ್ಮಧ್ಯೆ, ಡಾ. ಶಾ, ಇದು ಅಪರೂಪದ ಪ್ರಕರಣವಾಗಿರುವುದರಿಂದ ಇದು ಸವಾಲಿನ ಪ್ರಕರಣವಾಗಿತ್ತು ಎಂದು ಹೇಳಿದರು. ಅಂತಹ ಪ್ರಕರಣಗಳನ್ನು ಪತ್ತೆಹಚ್ಚುವುದು ಸಹ ಕಷ್ಟ.

    ಅಲ್ಲದೆ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅದು ಅಪಾಯಕಾರಿಯಾಗಬಹುದು ಎಂದು ಅವರು ಹೇಳಿದರು.ಕಣ್ಣಿನ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ, ಶಿವಕುಮಾರ್ ಈಗ ಸಾಮಾನ್ಯವಾಗಿ ನೋಡಲು ಸಮರ್ಥರಾಗಿದ್ದಾರೆ, ಮತ್ತು ಅವರ ಕಣ್ಣುಗಳು ಈಗ ನೋಯುತ್ತಿಲ್ಲ. ಶಸ್ತ್ರಚಿಕಿತ್ಸೆಗಾಗಿ ಶಿವಕುಮಾರ್ ಮತ್ತು ಅವರ ಕುಟುಂಬವು ಡಾ. ದೇವಾಂಶಿ ಶಾ ಅವರಿಗೆ ಧನ್ಯವಾದ ಅರ್ಪಿಸಿತು.

Recent Articles

spot_img

Related Stories

Share via
Copy link