ತುಮಕೂರು
ಕ್ರಿಯಾಶೀಲ ಕಾಯಕಯೋಗಿ, ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಶ್ರೀ ದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಯುತ ಡಾ. ಎಂ. ಆರ್. ಹುಲಿನಾಯ್ಕರ್ ಅವರ ಅಮೃತ ಮಹೋತ್ಸವ ಹಾಗೂ ಅವರ ಆತ್ಮಕಥನ ಅಂತರಂಗದ ಅವಲೋಕನ ಕೃತಿ ಬಿಡುಗಡೆ ಇದೇ ನ. 25 ಶನಿವಾರ ಬೆಳಿಗ್ಗೆ 11ಕ್ಕೆ ತುಮಕೂರಿನ ಲಿಂಗಾಪುರ ರಸ್ತೆ ಯ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಟಿ. ಆರ್. ಆಂಜಿನಪ್ಪ ಹಾಗೂ ಅಧ್ಯಕ್ಷರಾದ ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾರ್ಯ ಕ್ರಮ ದ ಮಾಹಿತಿ ಹಂಚಿಕೊಂಡ ಸಮಿತಿ ಪದಾಧಿಕಾರಿಗಳು, ಡಾ. ಹುಲಿನಾಯ್ಕರ್ ಶಿಕ್ಷಣ, ಆರೋಗ್ಯ, ಧಾರ್ಮಿಕ ರಾಜಕೀಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಮಾತ್ರ ವಲ್ಲದೆ ರಾಜ್ಯಾದ್ಯಂತ ತಮ್ಮ ದೇ ಕೊಡುಗೆ ಗಳ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಹಿಂದುಳಿದ ಹಾಲುಮತ ಸಮುದಾಯದ ಸಂಸ್ಕಾರವಂತ ಕುಟುಂಬದಲ್ಲಿ ಹುಟ್ಟಿ ವೃತ್ತಿ ಬದುಕಿಗಾಗಿ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಬಂದು ಕಲ್ಪತರು ನಾಡು ತುಮಕೂರಿನ ಲ್ಲಿ ನೆಲೆ ನಿಂತು ಸಮಾಜಮುಖಿಯಾಗಿ ಸಾಧನೆ ಮಾಡುತ್ತಿರುವುದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ.
ಅಜಾತಶತ್ರುವಿನಂತಹ ನಿಸ್ಪೃಹ ವ್ಯಕ್ತಿ ತ್ವದ ಡಾಕ್ಟರ್ ಹುಲಿನಾಯ್ಕರ್ ಅವರ ಸಾರ್ಥಕ ಐದು ದಶಕದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಅವರಿಗೆ 75ನೇ ವರ್ಷ ವಾಗಿರುವ ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಾರಂಭ ದ ಮೂಲಕ ಗೌರವ ಸಮರ್ಪಣೆ ಮಾಡಬೇಕೆಂದು ಅವರ ಅಭಿಮಾನಿಗಳು, ಹಿತೈಷಿಗಳು, ಪಕ್ಷಾತೀತವಾಗಿ ರಾಜಕೀಯ ಗಣ್ಯರು, ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖ ರು, ಡಾಕ್ಟರ್ ಕುಟುಂಬ ದವರು, ಶ್ರೀ ದೇವಿ ಸಮೂಹ ಎಲ್ಲರೂ ಒಡಗೂಡಿ ಈ ಕಾರ್ಯ ಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಶನಿವಾರ ಸಂಘಟಿಸಲಾಗಿದೆ.
ಜಿಲ್ಲೆ, ರಾಜ್ಯ, ದೇಶದ ವಿವಿಧ ಭಾಗಗಳಿಂದಲೂ ಹುಲಿನಾಯ್ಕರ್ ಅವರ ಅಭಿಮಾನಿ ಹಿತೈಷಿಗಳು, ವಿವಿಧ ಕ್ಷೇತ್ರದ ಮುಖಂಡರು ಹತ್ತು ಸಾವಿರಕ್ಕೂ ಮೇಲ್ಪಟ್ಟು ಸಂಖ್ಯೆ ಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಪೂರ್ವಭಾವಿ ಸಭೆ, ವಿವಿಧ ಸಮುದಾಯಗಳ ಮುಖಂಡರ ಭೇಟಿ ಮೂಲಕ ಸರ್ವರನ್ನು ಒಳಗೊಂಡಂತೆ ಕಾರ್ಯ ಕ್ರಮದ ಯಶಸ್ಸಿಗೆ ಸಮಿತಿಯ ಪ್ರಧಾನ ಸಂಚಾಲಕ, ಸಂಚಾಲಕರು, ಪದಾಧಿಕಾರಿಗಳು, ಎಲ್ಲಾ ಸದಸ್ಯರು ಸೇರಿದಂತೆ ಹುಲಿನಾಯ್ಕರ್ ಅವರ ಕುಟುಂಬ ವರ್ಗ ನಿರಂತರ ಶ್ರಮ ಹಾಕುತ್ತಿದ್ದಾರೆ.
ಈ ಅಭೂತಪೂರ್ವ ಅಮೃತ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವನ್ನು ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷ ರಾದ ಶ್ರೀ. ಶ್ರೀ ನಿರಂಜನಾನಂದಾಪುರಿ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಗಳು ಹಿರಿಯ ನಾಯಕರಾದ ಬಿ. ಎಸ್. ಯಡಿಯೂರಪ್ಪ ಅವರು ನೆರವೇರಿಸುತ್ತಿದ್ದಾರೆ.
ಲೇಖಕರು ಹಿರಿಯ ಪತ್ರಕರ್ತ ರಾಡ ಡಾ. ಕೆ. ಆರ್. ಕಮಲೇಶ್ ನಿರೂಪಣೆ ಯ “ಅಂತರಂಗದ ಅವಲೋಕನ” ಆತ್ಮಕಥನವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಬಿಡುಗಡೆ ಮಾಡಲಿದ್ದು, ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎನ್. ರಾಜಣ್ಣ ಅವರು ಅಭಿನಂದನಾ ನುಡಿಗಳಾಡುವರು. ಕೃತಿಯ ಮೊದಲ ಗೌರವ ಪ್ರತಿ ಯನ್ನು ಶಾಸಕ ಜಿ. ಬಿ. ಜ್ಯೋತಿ ಗಣೇಶ್ ಸ್ವೀಕರಿಸಲಿದ್ದು ವಿಜಯವಾಣಿ ಸಹಾಯಕ ಸಂಪಾದಕ ರುದ್ರ ಣ್ಣ ಹರ್ತಿಕೋಟೆ ಎರಡನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಗೊಳಿಸುವರು. ಖ್ಯಾತ ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಕೃತಿ ಕುರಿತು ಮಾತನಾಡುವರು. ಅಧ್ಯಕ್ಷ ತೆಯನ್ನು ಸಮಿತಿ ಅಧ್ಯಕ್ಷರಾದ ಎಸ್. ನಾಗಣ್ಣ ವಹಿಸುವರು.
ಪಕ್ಷಾತೀತವಾಗಿ, ಜಾತ್ಯಾತೀತ ವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹುಲಿನಾಯ್ಕರ್ ಅವರನ್ನು ಹತ್ತಿರ ದಿಂದ ಕಂಡವರು, ಅವರ ಆಪ್ತರು, ರಾಜಕೀಯ ಧುರೀಣ ರು, ಪೂಜ್ಯ ಸ್ವಾಮೀಜಿ ಗಳು, ವಿವಿಧ ಸಮುದಾಯದ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ತಮ್ಮ ವ್ಯಾಪಕ ಪ್ರಚಾರ, ಸಹಕಾರವನ್ನು ಈ ಮೂಲಕ ಕೋರುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವೈ. ಎಚ್. ಹುಚ್ಚಯ್ಯ, ಮೇಯರ್ ಪ್ರಭಾವತಿ ಸುದೀಶ್ವರ್, ಉಪಮೇಯರ್ ಟಿ. ಕೆ. ನರಸಿಂಹಮೂರ್ತಿ, ಟೂಡಾ ಮಾಜಿ ಅಧ್ಯಕ್ಷ ರಾದ ರೆಡ್ಡಿ ಚಿನ್ನಯಲ್ಲಪ್ಪ, ಆಡಿಟರ್ ಸುಲ್ತಾನ್, ಪಾಲಿ ಕೆ ಸದಸ್ಯ ರಾದ ನಯಾಜ್ ಅಹಮದ್, ಫರೀದಾಬೇಗಂ, ಇಂದ್ರಕುಮಾರ್, ಸಿ. ಎನ್. ರಮೇಶ್, ಶ್ರೀ ನಿವಾಸ್, ಲಕ್ಷ್ಮಿನರಸಿಂಹರಾಜು ಮಲ್ಲಿಕಾರ್ಜುನ ಯ್ಯ, ಟಿ. ಎಚ್. ವಾಸುದೇವ್, ಡಿ. ಎಂ. ಸತೀಶ್, ಶ್ರೀ ನಿವಾಸಪ್ರಸಾದ್, ಪಿ. ಮೂರ್ತಿ, ಟಿ. ಎನ್. ಮಧುಕ ರ್, ಡಾ. ರಮಣ್, ಎಂ. ಎಸ್. ಪಾಟೀಲ್, ಉಗಮಶ್ರೀನಿವಾಸ್, ಪುಟ್ಟರಾಜು, ಧರ್ಮರಾಜ್, ಮಲ್ಲಸಂದ್ರಶಿವಣ್ಣ, ಮುರಳಿ ಕೃಷ್ಣ ಪ್ಪ, ಅತಿಕ್ ಉಲ್ಲ ಖಾನ್ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ