ಮೆಕ್ಯಾನಿಕ್‍ಗಳ ಕೆಲಸಕ್ಕೆ ಸಮಯಾವಕಾಶ ನೀಡಿ

 ಹುಳಿಯಾರು : 

      ಮೆಕ್ಯಾನಿಕ್‍ಗಳಿಗೆ ವಾಹನಗಳನ್ನು ರಿಪೇರಿ ಮಾಡಲು ಈಗಿರುವ 10 ಗಂಟೆ ಸಮಯಾವಕಾಶವನ್ನು ವಿಸ್ತರಿಸಿ ಅನುಕೂಲ ಮಾಡುವಂತೆ ಹುಳಿಯಾರು ಮೆಕ್ಯಾನಿಕ್‍ಗಳು ಪಿಎಸ್‍ಐ ಕೆ.ಟಿ.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

      ಹುಳಿಯಾರು ಪಟ್ಟಣದ ಗ್ಯಾರೇಜ್‍ಗಳಲ್ಲಿ 10 ಗಂಟಯೊಳಗೆ ರಿಪೇರಿ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಕೆಲವೊಂದು ಸಂದರ್ಭದಲ್ಲಿ ಹೆಚ್ಚಿನ ಸಮಯ ಬೇಕಾಗುತ್ತದೆ ಆಗ ಪೊಲೀಸಲು ಬಂದು ಬಾಗಿಲು ಹಾಕುವಂತೆ ಸೂಚಿಸುತ್ತಾರೆ. ಆದರೆ ಕೆಲವರ ಅಂಗಡಿಗಳಲ್ಲಿ ವಾಹನ ನಿಲ್ಲಿಸಿಕೊಳ್ಳಲು ಸ್ಥಳವಕಾಶ ಇರುವುದಿಲ್ಲ. ರಿಪೇರಿ ಆಗದ ವಾಹನಗಳನ್ನು ಮಾಲೀಕರು ತೆಗೆದುಕೊಂಡು ಹೋಗುವುದು ಸಹ ಕಷ್ಟ. ಹಾಗಾಗಿ ಇನ್ನೊಂದು ಗಂಟೆ ಕಾಲವಕಾಶ ಕೊಡುವಂತೆ ಮನವಿ ಮಾಡಿದರು.

      ಅಲ್ಲದೆ ಕೆಲವೊಂದು ಸಂದರ್ಭದಲ್ಲಿ ಸುತ್ತಮುತ್ತ ಗ್ರಾಮಗಳಲ್ಲಿ ಕೆಟ್ಟಿರುವ ದ್ವಿಚಕ್ರವಾಹನ, ಆಟೋ, ಕಾರು, ಲಾರಿ, ಟ್ರ್ಯಾಕ್ಟರ್‍ಗಳನ್ನು ಸರಿಪಡಿಸಿ ಬರುವುದು ತಡವಾಗಿ ಹತ್ತು ಗಂಟೆ ಮೀರಿ ಸಮಯ ಆಗಿರುತ್ತದೆ. ಮಾರ್ಗದಲ್ಲಿ ಕೆಲಸ ಮುಗಿಸಿ ಬರುವಾಗ ಟೂಲ್ಸ್ ಕಿಟ್ ಇದ್ದರೂ ಪೊಲೀಸರು ನಮ್ಮ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಕೆಲಸಕ್ಕೆ ತೊಂದರೆಯಾಗುವ ಜೊತೆಗೆ ಅನಗತ್ಯವಾಗಿ ದಂಡ ಕಟ್ಟಬೇಕಿದೆ. ಹಾಗಾಗಿ ಹಳ್ಳಿಗಳಿಂದ ಬರುವ ಮೆಕ್ಯಾನಿಕ್‍ಗಳನ್ನು ಕೆಲಸ ಮುಗಿಸಿ ಮನೆಗೆ ಬರಲು ಅನುಕೂಲ ಮಾಡಿಕೊಡಬೇಕಾಗಿ ಕೇಳಿಕೊಂಡಿದ್ದಾರೆ.

      ಈ ಸಂದರ್ಭದಲ್ಲಿ ಯುವ ಮುಖಂಡ ಇಮ್ರಾಜ್, ಮೆಕ್ಯಾನಿಕ್ ಲಿಂಗರಾಜ್, ಇಮ್ರಾನ್, ಸದ್ದಾಮ್, ಅಮ್ಜದ್, ಅರ್ಫಾತ್, ಮುಜಮಿಲ್, ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap