ನಾಗರಕಲ್ಲಿನ ಬಳಿ ಮದ್ಯದಂಗಡಿ ತ್ಯಾಜ್ಯ

ಹುಳಿಯಾರು : 

      ಪ್ರತಿನಿತ್ಯ ಎಲ್ಲರಿಂದಲೂ ಪೂಜಿಸಲ್ಪಡುವ ನಾಗರಕಲ್ಲು ಹಾಗೂ ಅರಳಿಕಟ್ಟೆಯ ಪಕ್ಕದಲ್ಲಿ ಬಾರಿನ ತ್ಯಾಜ್ಯ ತಂದು ಸುರಿಯುತ್ತಿರುವ ಬಾರ್ ಅಂಗಡಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

      ಹುಳಿಯಾರಿನ ಬಸ್ ನಿಲ್ದಾಣದ ಬಳಿ ಇರುವ ಆಟೋಸ್ಟ್ಯಾಂಡ್ ಪಕ್ಕದ ನಾಗರ ಕಟ್ಟೆಯ ಬಳಿ ಮದ್ಯದ ಪಾಕೆಟ್‍ಗಳನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಸ್ವಚ್ಛತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಎಲ್ಲೆಂದರಲ್ಲಿ ಕಸ ಚೆಲ್ಲುವ ಇವರಿಗೆ ತ್ಯಾಜ್ಯ ಎಲ್ಲಿ ಹಾಕಬೇಕೆಂಬ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲದಾಗಿದೆ.

      ಪ್ರತಿನಿತ್ಯವೂ ಕೆರೆಗೆ, ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಮನಬಂದಂತೆ ತ್ಯಾಜ್ಯ ತಂದು ಸುರಿಯುವ ಇವರಿಗೆ ಈ ಹಿಂದೆ ಪಟ್ಟಣ ಪಂಚಾಯಿತಿಯವರು ನೋಟಿಸ್ ನೀಡಿದ್ದರೂ ಸಹ ತ್ಯಾಜ್ಯ ಎಸೆಯುವವರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಹಾಗಾಗಿ ಸ್ವಚ್ಚತೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಇವರುಗಳ ಬಗ್ಗೆ ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link