ಹುಳಿಯಾರು :
ಹೋಬಳಿಯ ವಿವಿಧ ಕಡೆಗಳಲ್ಲಿ ಮಂಗಳವಾರ ರಾತ್ರಿ ಸಾಧಾರಣ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ದಟ್ಟವಾದ ಮೋಡ ಇದ್ದರೂ ಕೇವಲ ತುಂತುರು ಮಳೆಯಾಗಿದೆ.
ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿಹೊಂಡ, ಕಟ್ಟೆ ಹಾಗೂ ಕೆರೆಗಳಿಗೆ ನೀರು ಬಂದಿದೆ. ತೋಟ, ಹೊಲಗಳಲ್ಲಿ ನೀರು ನಿಂತಿದೆ. ಕೆಲ ಗ್ರಾಮೀಣ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟಿವೆ.
ರಾಗಿ ಬಿತ್ತನೆ ಮಾಡಲು ಈ ಮಳೆ ನೆರವಾಗಲಿದೆಯಾದರೂ ಪೂರ್ವ ಮುಂಗಾರಿನಲ್ಲಿ ಬಿತ್ತಿದ್ದ ಹೆಸರು, ಅಲಸಂದೆಯ ಕೊಯ್ಲಿಗೆ ಅನಾನುಕೂಲವಾಗಿದೆ. ಅಲ್ಲದೆ ಕೊಯ್ಲು ಮಾಡಿ ಕಣ ಮಾಡಿದ್ದ ರೈತರಿಗೆ ಕಾಳು ಬೇರ್ಪಡಿಸುವ ಮೊದಲೆ ಮಳೆಯಿಂದ ನೆನೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಳೆ ವಿವರ:
ಹುಳಿಯಾರು 41.8 ಮಿಮೀ, ಬೋರನಕಣಿವೆ 30.4 ಮಿಮೀ, ಮತ್ತಿಘಟ್ಟ 37.5 ಮಿಮೀ, ದೊಡ್ಡಎಣ್ಣೇಗೆರೆ 20.2 ಮಿಮೀ, ಶೆಟ್ಟಿಕೆರೆ 4.2 ಮಿಮೀ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ