ಹುಳಿಯಾರು :
ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ವಾಸದ ಮನೆಯೊಂದು ಕುಸಿದು ಅಪಾರ ನಷ್ಟವಾದ ಘಟನೆ ಹುಳಿಯಾರು ಪಟ್ಟಣದಲ್ಲಿ ನಡೆದಿದೆ.
ಹುಳಿಯಾರಿನ ಮಾರುತಿ ನಗರದ ಸ್ವಾಮಿನಾಯ್ಕ ಎಂಬುವವರ ಮನೆ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ ಟೀವಿ, ಪಡಿತರ, ಪಾತ್ರೆ ಸೇರಿದಂತೆ ಗೃಹಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಹುಳಿಯಾರು ಪಟ್ಟಣದಲ್ಲಿನ ಅಸಮರ್ಪಕ ಚರಂಡಿಯಿಂದಾಗಿ ಮೇಲ್ಭಾಗದಿಂದ ಹರಿದು ಬಂದ ನೀರು ಸ್ವಾಮಿನಾಯ್ಕ ಅವರ ಮನೆಗೆ ನುಗ್ಗಿದೆ. ಭಾರಿ ನೀರು ಸಂಗ್ರಹವಾಗಿದನ್ನು ಕಂಡು ಪತ್ನಿಯೊಂದಿಗೆ ಸ್ವಾಮಿನಾಯ್ಕ ಪಕ್ಕದ ಮನೆಗೆ ತೆರಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ