ಹುಳಿಯಾರು : ಕೊರೊನಾ ಆತಂಕ ಬದಿಗಿತ್ತು ತೇರು ಎಳೆದ ಜನ!!

 ಹುಳಿಯಾರು :  

      ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವವನ್ನು ಏರ್ಪಡಿಸಲಾಗಿತ್ತು. ಅಪಾರ ಸಂಖ್ಯೆಯ ಭಕ್ತರು ಆಗಮಿಸಿದರಲ್ಲದೆ ಕೊರೊನಾ ಆತಂಕ ಬದಿಗಿತ್ತು ಹನುಮನ ತೇರು ಎಳೆದು ಸಂಭ್ರಮಿಸಿದರು.

      ಕೊರೊನಾದಿಂದಾಗಿ ಹೆಚ್ಚು ಭಕ್ತರು ಸೇರುವುದಿಲ್ಲ ಎಂದು ಕಮಿಟಿ ಭಾವಿಸಿತ್ತು. ಹಾಗಾಗಿಯೇ ಸಾಂಸ್ಕøತಿಕ ಕಾರ್ಯಕ್ರಮಗಳು, ರಾಜಬೀದಿ ಉತ್ಸವವನ್ನು ಈ ವರ್ಷ ಕೈಬಿಟ್ಟು ರಥೋತ್ಸವವನ್ನು ಮಾತ್ರ ಆಯೋಜಿಸಿತ್ತು. ಮುಂಜಾನೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತಾದರೂ ಭಕ್ತರು ಸ್ಪಂದನೆ ವಿರಳವಾಗಿತ್ತು.

      ತೆರೆ ಎಳೆಯಲು ಜನ ಬಂದರೆ ಸಾಕು ಎಂದುಕೊಂಡು ಕಮಿಟಿಯವರು ರಥವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಊರಿನ ಗ್ರಾಮದೇವತೆಗಳಾದ ಶ್ರೀದುರ್ಗಾಪರಮೇಶ್ವರಿ ಹಾಗೂ ಶ್ರೀಹುಳಿಯಾರಮ್ಮ ದೇವರುಗಳನ್ನು ಆಹ್ವಾನಿಸಿ ರಥೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಅಚ್ಚರಿ ಎನ್ನುವಂತೆ ದೇವರು ರಥಕ್ಕೆ ಕುಳ್ಳಿರಿಸುವಷ್ಟರಲ್ಲಿ ಸಾಕರೋಪಾದಿಯಲ್ಲಿ ಭಕ್ತರು ಆಗಮಿಸಿದರು.

      ಕಳಸಕ್ಕೆ ಅಭಿಷೇಕ ನೆರವೇರಿಸಿ ಮಂಗಳವಾದ್ಯದೊಂದಿಗೆ ವೈಭವದಿಂದ ರಥೋತ್ಸವ ನೆರವೇರಿಸಲಾಯಿತು. ಭಕ್ತಾಧಿಗಳು ಉತ್ಸವದುದ್ದಕ್ಕೂ ಬಾಳೆಹಣ್ಣು ಎಸೆಯುತ್ತಿದ್ದರೆ ಯುವಕರು ಅತೀ ಉತ್ಸಾಹದಿಂದ ತೇರು ಎಳೆಯಲು ಮುಗಿಬಿದ್ದರು.

     ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊವಿಡ್ ನಿಯಮ ಗಾಳಿಗೆ ತೂರಿ ರಥೋತ್ಸವ ಅದ್ದೂರಿಯಾಗಿಸಿದರು. ಮಹಿಳೆಯರು ಹಣ್ಣುಕಾಯಿ ಸೇವೆ ಸಲ್ಲಿಸಿದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿ ಕೊರೊನಾದಲ್ಲೂ ಯಶಸ್ವಿಯಾಗಿ ಹನುಮಜಯಂತಿ ಆಚರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link