ಕಾನ್ಸ್ಟೇಬಲ್‍ಗಳಿಂದಲೆ ಪಿಎಸ್‍ಐಗೆ ಒಳ್ಳೆಯ ಹೆಸರು

ಹುಳಿಯಾರು : 

     ಆಟಗಾರರೆಲ್ಲರೂ ಉತ್ತಮವಾಗಿ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿದಾಗ ತಂಡದ ನಾಯಕನಿಗೆ ಹೇಗೆ ಒಳ್ಳೆಯ ಹೆಸರು ಬರುತ್ತದೆಯೋ ಹಾಗೆ ಕಾನ್ಸ್ಟೇಬಲ್ಸ್ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಆ ಠಾಣೆಯ ಪಿಎಸ್‍ಐಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹುಳಿಯಾರು ಪಿಎಸ್‍ಐ ಕೆ.ಟಿ.ರಮೇಶ್ ತಿಳಿಸಿದರು.

      ಹುಳಿಯಾರು ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸರಿಗೆ ಭಾನುವಾರ ಸಂಜೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಹುಳಿಯಾರು ಪಿಎಸ್‍ಐ ಆಗಿ ನನಗೆ ಒಳ್ಳೆಯ ಹೆಸರು ಬಂದಿದ್ದಾರೆ. ಅದಕ್ಕೆ ಕಾರಣ ಇಲ್ಲಿನ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಎಂದು ಇಲ್ಲಿನ ಪೊಲೀಸರನ್ನು ಪ್ರಶಂಸಿಸಿದರಲ್ಲದೆ ಇಲ್ಲಿಂದ ವರ್ಗಾವಣೆಗೊಂಡ ಎಲ್ಲಾ ಪೊಲೀಸರು ನೀವು ತೆರಳುವ ಠಾಣೆಯಲ್ಲೂ ಸಹ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿ ಜನಸ್ನೇಹಿ ಪೊಲೀಸರಾಗಿ ಹೆಸರುಗಳಿಸುವಂತೆ ಸಲಹೆ ನೀಡಿದರು

      ಕಾನ್ಸ್ಟೇಬಲ್‍ಗಳಾಗಿ ಕೆಲಸಕ್ಕೆ ಸೇರಿ ಕೊನೆಯಲ್ಲಿ ಕಾನ್ಸ್ಟೇಬಲ್‍ಗಳಾಗಿಯೇ ನಿವೃತ್ತಿ ಪಡೆಯದೆ ಇಲಾಖೆಯಲ್ಲಿ ಕಾಲಕಾಲಕ್ಕೆ ನೀಡುವ ಬಡ್ತಿ ಪಡೆದು, ತಮ್ಮ ಅನುಭವವನ್ನು ಇಲಾಖೆಗೆ ಧಾರೆ ಎರೆಯಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯ ಪರೀಕ್ಷೆಗಳನ್ನು ಬರೆದು ತೇರ್ಗಡೆಯಾಗುವುದು ಅತ್ಯಗತ್ಯವಾಗಿದ್ದು, ಎಲ್ಲರೂ ಇಲಾಖೆಯ ಎಲ್ಲಾ ಪರೀಕ್ಷೆಗಳನ್ನು ತಾತ್ಸಾರ ಮಾಡದೆ ಬರೆಯಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಹಿರಿಯರ ಮಾರ್ಗದರ್ಶನ ಪಡೆಯಬೇಕು ಎಂದರು.

      ಈ ಸಂದರ್ಭದಲ್ಲಿ ವಯೋ ನಿವೃತ್ತರಾದ ಎಎಸ್‍ಐ ಆನಂದ್ ಹಾಗೂ ಹುಳಿಯಾರ್ ಠಾಣೆಯಿಂದ ವರ್ಗಾವಣೆಗೊಂಡ ಎಂ.ಆರ್.ಶಂಕರ್, ಮಹಮ್ಮದ್ ಮುಕ್ತಿಯಾರ್, ಜಾಫರ್, ಮಂಜಪ್ಪ, ಗೋಪಾಲಕೃಷ್ಣ, ಮಲ್ಲಿಕಾರ್ಜುನಯ್ಯ ಅವರುಗಳನ್ನು ಗೌರವಿಸಲಾಯಿತು. ಚಿಕ್ಕನಾಯಕನಹಳ್ಳಿ ಪಿಎಸ್‍ಐ ಹರೀಶ್, ಹಂದನಕೆರೆ ಪಿಎಸ್‍ಐಗಳಾದ ಯೋಗೇಶ್ ಹಾಗೂ ಶಿವಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link