ಮಳೆಗೆ 2 ಮನೆಗಳ ಗೋಡೆ ಕುಸಿತ

 ಹುಳಿಯಾರು : 

      ಹುಳಿಯಾರು ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ 2 ಮನೆಗಳ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ.

      ಇಲ್ಲಿನ ಪೇಟೆಬೀದಿಯ ಚಿರುಮುರಿ ಶ್ರೀನಿವಾಸ್ ಅವರ ಅಡಿಗೆ ಮನೆಯ ಮೇಲ್ಚಾವಣಿಯ ಮೇಲೆ ಪಕ್ಕದ ಸೈಯದ್‍ಅಹಮದ್ ಅವರ ಗೋಡನ್‍ನ ಗೋಡೆಗಳು ಬಿದ್ದು ಶ್ರೀನಿವಾಸ್ ಅವರಿಗೆ ಸೇರಿದ ಸಿಂಟೆಕ್ಸ್, ಮೇಲ್ಚಾವಣಿ ಶೀಟ್‍ಗಳು, ಅಡಿಗೆ ಮನೆಯ ವಸ್ತುಗಳು ಹಾಗೂ ದಿನಸಿ ಪದಾರ್ಥಗಳು ಹಾಳಾಗಿವೆ.

       ಇನ್ನು, ತಿಮ್ಲಾಪುರ ಕೆರೆ ಕೋಡಿ ಬಳಿಯ ವಿಕಲಚೇತನ ವರದಪ್ಪ ಅವರ ವಾಸದ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಅಲ್ಲದೆ ಮನೆಯ ಉಳಿದ ಗೋಡೆಗಳೂ ಸಹ ಸಂಪೂರ್ಣ ಶಿಥಿಲವಾಗಿದ್ದು, ಆಗಲೋ, ಈಗಲೋ ಬೀಳುವ ಹಂತದಲ್ಲಿವೆ. ಈ ಗೋಡೆಗಳೂ ಕುಸಿದರೆ ವರದಪ್ಪ ಅವರು ಬೀದಿಗೆ ಬೀಳಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link