ಹುಳಿಯಾರು :
ಕೊರೊನಾ ಸೋಂಕು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ 6 ರಿಂದ 8 ನೇ ತರಗತಿಯ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಹಸಿರು ನಿಶಾನೆ ನೀಡಿದು,್ದ ಸೋಮವಾರ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಆಗಮಿಸಿದರು.
ಮೊದಲ ಹಂತದಲ್ಲಿ 9 ರಿಂದ 12 ನೆ ತರಗತಿ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಹಿರಿಯ ಪ್ರಾಥಮಿಕ ಪಾಠಶಾಲೆ ಆರಂಭಿಸಲಾಗಿದೆ. ಹಾಗಾಗಿ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಆರಂಭವಾದವು.
ಬಹುತೇಕ ಶಿಕ್ಷಕರು ಕೋವಿಡ್ ಲಸಿಕೆ ಪಡೆದುಕೊಂಡಿದ್ದು ಶಾಲಾ ಕೊಠಡಿ ಮತ್ತು ಆವರಣವನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲದೆ ಮಕ್ಕಳಿಗೆ ಬಿಸಿ ನೀರು, ಆಹಾರ, ಮಾಸ್ಕ್ ತರುವಂತೆ ತಿಳಿಸಲಾಗಿತ್ತು. ಆದರೆ ಮಾಸ್ಕ್‍ನೊಂದಿಗೆ ಆಗಮಿಸಿದ ಮಕ್ಕಳು ಮಧ್ಯಾಹ್ನ ಶಾಲೆ ಬಿಡುವುದರಿಂದ ಯಾರೊಬ್ಬರೂ ಆಹಾರ ತಂದಿರಲಿಲ್ಲ.
ಕೊರೊನಾ ಸೋಂಕು ಕಡಿಮೆ ಆಗುತ್ತಿರುವುದು ಪಾಲಕರಲ್ಲಿ ಕೊಂಚ ಧೈರ್ಯ ತಂದಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯ ಮನಗಂಡು ಪಾಲಕರು ಶಾಲೆಗೆ ಕಳುಹಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ಖುಷಿಯಿಂದ ಒಪ್ಪಿಗೆ ಪತ್ರ ಸಹ ಕಳುಹಿಸಿಕೊಟ್ಟಿದ್ದರು. ಪರಿಣಾಮ ಶೇ.80 ರಷ್ಟು ಮಕ್ಕಳು ಮೊದಲ ದಿನ ಹಾಜರಾಗಿದ್ದರು.
ಈಗಾಗಲೇ ಆನ್‍ಲೈನ್ ಮೂಲಕ ಇಲ್ಲವೇ ಚಂದನವಾಹಿನಿ ಮೂಲಕ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಇವರನ್ನು ಈಗ ಬೌದ್ಧಿಕ ತರಗತಿಗೆ ಕರೆತಂದಿದ್ದು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರವೇಶಕ್ಕೆ ಅವಕಾಶ ನೀಡುವುದು, ಅಂತರ ಪಾಲನೆ ಮಾಡಿಕೊಂಡು ತರಗತಿಗಳನ್ನು ಆರಂಭಿಸುವುದು, ಮಕ್ಕಳಿಗೆ ಸಿಹಿ, ಹೂವು ಕೊಡುವುದು ಸಾಮಾನ್ಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ