ಹುಳಿಯಾರು : 4 ಚೆಕ್ ಡ್ಯಾಂಗಳಿಗೆ ಭೂಮಿ ಪೂಜೆ

ಹುಳಿಯಾರು :

      ರೈತರಿಗೆ ಅನುಕೂಲ ಹಾಗೂ ಅಂತರ್ಜಲ ಮಟ್ಟ ಸುಧಾರಣೆಗಾಗಿ ಸುಮಾರು 6 ಕೋಟಿ ರೂ. ವೆಚ್ಚದ 4 ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

      ಬಡಕೆಗುಡ್ಲು-ಹುಲ್ಲೆನಹಳ್ಳಿ ಭೂತಪ್ಪ ದೇವಾಲಯದ ಹತ್ತಿರ, ಹುಲ್ಲೆನಹಳ್ಳಿ ಪಟೇಲರು ಮತ್ತು ಸಣ್ಣಕಾಮಯ್ಯ ಅವರ ಜಮೀನು ಹತ್ತಿರದ ಹಳ್ಳ, ಮೈಲಕಬ್ಬೆ ಡಾ.ಚಿದಾನಂದಪ್ಪ ಅವರ ಜಮೀನು ಹತ್ತಿರದ ಹಳ್ಳ ಹಾಗೂ ಗಂಟೆನಹಳ್ಳಿ ಹಳ್ಳದ ಹತ್ತಿರ ಚೆಕ್ ಡ್ಯಾಂ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಯಿತು.

      ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಮಂಜುಳಮ್ಮ, ತಾಪಂ ಮಾಜಿ ಸದಸ್ಯ ಕೇಶವಮೂರ್ತಿ, ಎಂಜಿನಿಯರ್‍ಗಳಾದ ರವಿಸುರನ್ ಹಾಗೂ ಎ.ಇ.ಪ್ರಭಾಕರ್ ಮತ್ತು ಕಾಮಗಾರಿ ಕಂಟ್ರ್ಯಾಕ್ಟರ್ ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link