ಹುಳಿಯಾರು :
ಅಂಕಸಂದ್ರ ಅಣೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ಬರಕನಹಾಳ್ ಮೂಲದ ಯುವಕ ದಯಾನಂದನ ಕಳೆಬರದ ಶೋಧ ಕಾರ್ಯ ಭಾನುವಾರ ಸಹ ವಿಫಲವಾಗಿದೆ. ತಿಪಟೂರಿನ ವಿಶೇಷ ಮುಳುಗು ತಜ್ಞರನ್ನು ಸಹ ಭಾನುವಾರ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗಿತ್ತು.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ ಪ್ರಯತ್ನ ನಡೆಸಿದರಾದರೂ ಮೃತದೇಹ ಸಿಗಲಿಲ್ಲ. ಅಣೆಯ ಆಳದಲ್ಲಿ ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳು ಹೇರಳವಾಗಿ ಇರುವುದರಿಂದ ಮುಳುಗು ತಜ್ಞರು ಕೆಳಗೆ ಹೋಗಲು ಸಾಧ್ಯವಾಗುತ್ತಿಲ್ಲ.
ಮುಳ್ಳಿನ ಗಿಡಗಳ ಮಧ್ಯೆ ಮೃತದೇಹ ಸಿಲುಕಿಕೊಂಡಿರುವ ಸಾಧ್ಯತೆಯಿದ್ದು, ಸೋಮವಾರವೂ ಸಹ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
