ಹುಳಿಯಾರು :
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀ ರಂಗನಾಥ ಸ್ವಾಮಿಯ ಪಟ್ಟದ ಬಸವ ಗುರುವಾರ ಸಾವನಪ್ಪಿದ್ದು, ಗ್ರಾಮಸ್ಥರು ಸೇರಿ ಬಸವನ ಮೆರವಣಿಗೆ ಮಾಡಿದರಲ್ಲದೆ ಶಾಸ್ತ್ರೋಕ್ತವಾಗಿ ಅದರ ಅಂತ್ಯಕ್ರಿಯೆ ನಡೆಸಿದರು.
ಸುಮಾರು 20 ವರ್ಷ ವಯಸ್ಸಿನದಾಗಿದ್ದ ಬಸವ ಅನೇಕ ವರ್ಷದಿಂದ ಸ್ವಾಮಿಯ ಪಟ್ಟದ ಬಸವನಾಗಿದ್ದು, ಜಾತ್ರೆ ಸಮಯ, ಪುರದ ಮಠದ ಕೃತಿಕೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ನಗಾರಿಯನ್ನು ಹೊತ್ತು ತನ್ನ ಸೇವೆ ಸಲ್ಲಿಸುತ್ತಿತ್ತು.
ಗ್ರಾಮ ದೇವತೆ ಕಾಳಮ್ಮದೇವಿಯ ಸಮ್ಮುಖದಲ್ಲಿ ಊರಿನ ಪ್ರಮುಖ ಬೀದಿಯಲ್ಲಿ ಬಸವನ ಪಾರ್ಥೀವ ಶರೀರ ಉತ್ಸವ ನಡೆಸಿ, ಊರಿನ ಬನ್ನಿ ಮರದ ಬಳಿ ಅಂತ್ಯಕ್ರಿಯೆ ನಡೆಸಲಾಯಿತು. ನಂತರ ಪಾನಕ ಪನಿವಾರ ವಿತರಿಸಲಾಯಿತು.