ಮೇಲಧಿಕಾರಿಗಳಿಗೆ ಸಂಗೇನಹಳ್ಳಿಯ ನೈಜ ಸಂಗತಿ ವರದಿ

 ಹುಳಿಯಾರು:

     ಹುಳಿಯಾರು ಸಮೀಪದ ಸಂಗೇನಹಳ್ಳಿಯ ಮುಖ್ಯಶಿಕ್ಷಕಿಯ ವಿರುದ್ಧ ಬಂದಿರುವ ಆರೋಪಗಳ ನೈಜ ಸಂಗತಿಯನ್ನು ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳುವ ಮೂಲಕ ಬಿಇಓ ಕಾತ್ಯಾಯಿನಿ ಅವರು ಮುಖ್ಯಶಿಕ್ಷಕಿಯ ವರ್ಗಾವಣೆ ಪಟ್ಟುಹಿಡಿದು ತರಗತಿ ಬಹಿಷ್ಕರಿಸಿ ಧರಣಿ ಕುಳಿತಿದ್ದವರ ಮನವೊಲಿಸಿ ಎಂದಿನಂತೆ ತರಗತಿಗಳು ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

      ಸಂಗೇನಹಳ್ಳಿ ಮುಖ್ಯಶಿಕ್ಷಕಿ ಸುಜಾತ ಅವರಿಗೆ ಬೋದನಾಸಕ್ತಿ ಇಲ್ಲ, ಶಾಲೆಯ ಅಡಿಗೆ ಕೋಣೆ, ಶೌಚಾಲಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳನ್ನು ನಡೆಸದೆ ಮಕ್ಕಳಲ್ಲಿ ಕಲಿಕಾಸಕ್ತಿ ಕುಂದಿಸಿದ್ದಾರೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದರೂ ಸಹ ಪಠ್ಯ ಪುಸ್ತಕ, ಶೂ, ಬಟ್ಟೆ, ರೇಷನ್ ಕೊಟ್ಟಿಲ್ಲ. ಹಾಗಾಗಿ ಮುಖ್ಯಶಿಕ್ಷಕಿಯನ್ನು ವರ್ಗಾಯಿಸುವಂತೆ ಒತ್ತಾಯಿಸಿ ಪೋಷಕರು, ಗ್ರಾಮಸ್ಥರ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಧರಣಿ ಹಮ್ಮಿಕೊಂಡಿದ್ದರು.

     ಧರಣಿ ಸ್ಥಳಕ್ಕೆ ಕ್ಷೇತ್ರಶಿಕ್ಷಣಾಧಿಕಾರಿ ಕಾತ್ಯಾಯಿತಿ ಅವರು ಆಗಮಿಸಿ ಧರಣಿನಿರತರ ಅಹವಾಲು ಆಲಿಸಿದರು. ಮಕ್ಕಳಿಗೆ ಸರಿಯಾಗಿ ಪಠ್ಯ ಬೋದಿಸುತ್ತಿಲ್ಲ ಎನ್ನುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಇವರು ಧರಣಿ ಸ್ಥಳದಲ್ಲೇ ಮಕ್ಕಳಿಗೆ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರಾದರೂ ಉತ್ತರಿಸುವಲ್ಲಿ ಮಕ್ಕಳು ತಡಪಡಿಸಿದರು. ಅಲ್ಲದೆ ಲಿಖಿತ ಪರೀಕ್ಷೆ ನಡೆಸಿ ಮಕ್ಕಳ ಕಲಿಕಾ ಸಾಮಥ್ರ್ಯ ಪರೀಕ್ಷಿಸಿದಾಗ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡುಬಂದಿತು.

     ಅಲ್ಲದೆ ದಾಖಲೆ ಪರಿಶೀಲಿಸಲಾಗಿ ಪಠ್ಯಪುಸ್ತಕ, ಶೂ, ಪಡಿತರ ಕೊಟ್ಟಿದ್ದು ಪೋಷಕರೇ ಇದಕ್ಕೆ ಸಹಿ ಹಾಕಿದ್ದಾರೆ. ಹಾಗಾಗಿ ಪೋಷಕರ ದೂರು ಮತ್ತು ಮುಖ್ಯಶಿಕ್ಷಕಿಯ ಕರ್ತವ್ಯ ನಿರ್ವಹಣೆಯ ಬಗ್ಗೆ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ನೈಜ ಸಂಗತಿ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪೋಷಕರು ಮೇಲಧಿಕಾರಿಗಳು ಕ್ರಮ ತೆಗೆದುಕೊಂಡು ವರ್ಗಾವಣೆಯಾಗುವವರೆವಿಗೂ ಮುಖ್ಯಶಿಕ್ಷಕಿ ರಜೆ ಮೇಲೆ ತೆರಳಬೇಕು. ಇವರೆ ಮತ್ತೆ ಶಾಲೆಗೆ ಬಂದರೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿಯಲಾಗಿ ಮುಖ್ಯಶಿಕ್ಷಕಿಯನ್ನು ರಜೆ ಮೇಲೆ ತೆರಳಲು ಸೂಚಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap