ಹುಳಿಯಾರು :

ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ-ಬರದಲೇಪಾಳ್ಯ ಮದ್ಯೆ ಈಶ್ವರ ದೇವಸ್ಥಾನ ಬಳಿ ಇರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಲೈನ್ ತುಂಡಾಗಿ ನೇತಾಡುತ್ತಿದ್ದು ತಕ್ಷಣ ದುರಸ್ಥಿ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಲೈನ್ ತುಂಡಾಗಿ ನೇತಾಡುತ್ತಿರುವ ವಿದ್ಯುತ್ ಕಂಬದ ಆಸುಪಾಸಿನಲ್ಲಿ ಕುರಿಗಾಹಿಗಳು, ವಾಹನ ಸುವಾರರು, ದನ ಕರುಗಳು ಓಡಾಡುತ್ತಿರುತ್ತವೆ. ಹಾಗಾಗಿ ಅವಘಡ ಸಂಭವಿಸುವ ಮೊದಲು ಬೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಳ್ಳುವುದು ಒಳೆಯದು ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.
ಬೆಸ್ಕಾಂ ಇಲಾಖೆಯವರಿಗೆ ತಿಳಿಸಿದರೂ ದುರಸ್ತಿಗೆ ಮುಂದಾಗದೆ ನಿರ್ಲಕ್ಷ್ಯಿಸಿದ್ದಾರೆ. ಹಾಗಾಗಿ ತುಂಡಾಗಿ ಬಿದ್ದು ಅನಾಹುತ ಆಗುವ ಮುನ್ನ ಲೈನ್ ಸರಿಪಡಿಸಲು ಮೇಲಧಿಕಾರಿಗಳಿಗೆ ಸೂಚನೆ ನೀಡುವಂತೆ ಸ್ಥಳೀಯರು ಕೇಳಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








