ಹುಳಿಯಾರು :
ಹುಳಿಯಾರು ಹೋಬಳಿಯಲ್ಲಿ ಮಂಗಳವಾರ ಬೆಳಿಗ್ಗೆ ಉತ್ತಮ ಮಳೆಯಾಗಿದ್ದು ರೈತರ ಮುಖದಲ್ಲಿ ಸಂತಸ ಮೂಡಿದೆ.
ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು 30 ನಿಮಿಷ ಎಡ ಬಿಡದೆ ಸುರಿಯಿತು ಹೋಬಳಿಯ ಯಳನಾಡು, ಕೋರಗೆರೆ, ನಂದಿಹಳ್ಳಿ, ಗಾಣಧಾಳು, ಕೆಂಕೆರೆ ಭಾಗದಲ್ಲಿ ಮಳೆ ಬಂದಿದೆ. ಗುಡುಗು ಸಿಡಿಲಿನ ಅಬ್ಬರ ಇಲ್ಲದಿದ್ದರೂ ಕೆಲವೆಡೆ ಬಿರುಗಾಳಿ ಬೀಸಿತ್ತು ಪರಿಣಾಮ 1 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
