ಹುಳಿಯಾರು :
ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ನೇತೃತ್ವದಲಿ ತಿಪಟೂರು ಉಪ ವಿಭಾಗಾಧಿಕಾರಿಗಳಾದ ದಿಗ್ವಿಜಯ, ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ.ತೇಜಸ್ವಿನಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿಯಾದ ಹನುಮಂತರಾಜು ಅವರ ಸಮ್ಮುಖದಲ್ಲಿ ಕೋವಿಡ್ ಸಂಬಂಧ ಟಾಸ್ಕ್ ಪೋರ್ಸ್ ಸಭೆಯನ್ನು ನಡೆಸಲಾಯಿತು.
ಶೆಟ್ಟಿಕೆರೆ, ದುಗುಡೀಹಳ್ಳಿ, ಕುಪ್ಪೂರು, ಮತ್ತಿಘಟ್ಟ ಮತ್ತು ಹಂದನಕೆರೆ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿ.ಹೆಚ್.ಸಿ ವೈದ್ಯಾಧಿಕಾರಿಗಳು, ಆಶಾಕಾರ್ಯಕರ್ತೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೊರೊನಾ ಪಾಸಿಟಿವ್ ಬಂದು ಐಸೋಲೇಷನ್‍ನಲ್ಲಿ ಇರುವವರನ್ನು ತಕ್ಷಣ ಕೋವಿಡ್ ಸೆಂಟರ್‍ಗೆ ಕಳಿಸಬೇಕು. ಅವರು ಹೋಗದಿದ್ದರೆ ಪೊಲೀಸರ ಸಹಕಾರ ಪಡೆದು ಕೋವಿಡ್ ಸೆಂಟರ್‍ಗಳಿಗೆ ಕಳಿಸುವಂತೆ ಸಚಿವರು ಸಭೆಯಲ್ಲಿ ಸೂಚಿಸಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಸೇವಾಟ್ರಸ್ಟ್ ವತಿಯಿಂದ ಕೋವಿಡ್ ಮೆಡಿಸಿನ್ ಕಿಟ್‍ಗಳನ್ನು ಕೋವಿಡ್ ರೋಗಿಗಳಿಗೆ ನೀಡಲು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ