ಈಶ್ವರಾನಂದಪುರಿ ಶ್ರೀಗಳಿಂದ 100 ದಿನ 1000 ಹಳ್ಳಿ ಪ್ರವಾಸ

 ಹುಳಿಯಾರು :

      ಹೊಸದುರ್ಗದ ಕಾಗಿನೆಲೆ ಶಾಖಾಮಠದಲ್ಲಿ ನಡೆಯುತ್ತಿರುವ ಬಹುಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಲುವಾಗಿ ಭಕ್ತರ ಸಹಕಾರ ಪಡೆಯಲು ಸಂಕ್ರಾಂತಿ ಹಬ್ಬದ ದಿನದಿಂದ “100 ದಿನ 1000 ಹಳ್ಳಿಗಳು” ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಈಶ್ವರಾನಂದಪುರಿ ಶ್ರೀಗಳು ತಿಳಿಸಿದರು.

     ಹುಳಿಯಾರಿನ ಶ್ರೀ ಬೀರಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೊಸದುರ್ಗ ಮಠದಲ್ಲಿ ಬಹುಕೋಟಿ ರೂ. ವೆಚ್ಚದಲ್ಲಿ ಶಾಲೆ, ಕಾಲೇಜು, ಹಾಸ್ಟೆಲ್ ನಿರ್ಮಿಸುತ್ತಿದ್ದು, 10 ಕೋಟಿ ರೂ. ವೆಚ್ಚದ ಕಾಮಗಾರಿ ಈಗಾಗಲೇ ಪೂರ್ಣಕೊಂಡಿದೆ. ಈಗ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರತಿ ಕುರುಬರ ಮನೆಗೆ ಕನಿಷ್ಠ 1,000 ಸಾವಿರ ರೂ. ದೇಣಿಗೆ ಕೇಳುತ್ತಿದ್ದೇವೆ ಎಂದರು.

     ಒಂದು ಹಳ್ಳಿಗೆ ಒಂದು ರಸೀದಿ ಪುಸ್ತಕ ನೀಡುತ್ತೇವೆ. ಹಳ್ಳಿಯಲ್ಲಿ ಸಂಗ್ರಹವಾದ ಹಣವನ್ನು ಆಯಾ ಹಳ್ಳಿಯಲ್ಲೇ ಕೊಟ್ಟವರ ಹೆಸರು ಮತ್ತು ಹಣದ ಸಹಿತ ಘೋಷಣೆ ಮಾಡುವ ಮೂಲಕ ಹಣ ಸಂಗ್ರಹಣೆಯ ಪಾರದರ್ಶಕತೆ ಪ್ರದರ್ಶಿಸುವುದಾಗಿ ತಿಳಿಸಿದರು.
ಪ್ರತಿ ಹಳ್ಳಿಯಲ್ಲೂ 10-15 ಕುರುಬರ ಮನೆಗಳಿವೆ. ಕೆಲ ಊರಿನಲ್ಲಿ 3 ಸಾವಿರ ಮನೆಗಳೂ ಸಹ ಇವೆ. ಈ ರೀತಿ 1,000 ಹಳ್ಳಿಯ ಜನರು ಒಗ್ಗಟ್ಟಾಗಿ ನೀಡಿದ ಹಣದಿಂದ ಮಠದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ಭಕ್ತರ ಹಣದಿಂದ ಹೇಗೆ ಮಠ ಅಭಿವೃದ್ಧಿ ಪಡಿಸಿದ್ದಾರೆಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಉದ್ದೇಶ ಸಹ ಇದರಲ್ಲಿದೆ ಎಂದರು.

      ಪ್ರತಿ ಹಳ್ಳಿಗೆ ಐವರು ಮುಖಂಡರು, ಇಬ್ಬರು ಕಾರ್ಯಕರ್ತರನ್ನು ನೇಮಿಸಿಕೊಳ್ಳುವ ಮೂಲಕ ಶ್ರೀಮಠದಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ, ದೀಪೋತ್ಸವ, ಕನಕ ಜಯಂತಿ, ಮುಂತಾದ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಠದ ಭಕ್ತರಿಗೆ ತಿಳಿಸುವ ಪ್ರಯತ್ನ ಹಾಗೂ ಮಠದೊಂದಿಗೆ ಭಕ್ತರ ಬಾಂಧವ್ಯ ವೃದ್ಧಿ ಮಾಡುವ ಪ್ರಯತ್ನ ಸಹ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉದಯಶಂಕರಒಡೆಯರ್, ದುರ್ಗೇಗೌಡ, ಎಸ್.ರಾಮಯ್ಯ, ಎನ್.ಬಿ.ಗವಿರಂಗಯ್ಯ, ಬೀರಯ್ಯ ಸೇರಿದಂತೆ ಕುರುಬ ಸಮುದಾಯದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap