ಮಿಯಾಮಿ:
ಡಬ್ಲ್ಯೂ ಡಬ್ಲ್ಯೂಇ ದಿಗ್ಗಜ ಹಲ್ಕ್ ಹಾಗನ್ ಹೃದಯಾಘಾತದಿಂದ ನಿಧನರಾದರು ಎಂದು ಅಮೆರಿಕದ ಮಾಧ್ಯಮಗಳು ವರದಿಮಾಡಿವೆ. ಫ್ಲೋರಿಡಾದಲ್ಲಿರು ತಮ್ಮ ನಿವಾಸದಲ್ಲಿರುವಾಗ ಹಲ್ಕ್ ಹೋಗಾನ್‌ಗೆ ಹೃದಯಾಘಾತವಾಗಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆಸಿರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಲೆದರು ಎಂದು ಕುಟುಂಬ ಮೂಲಗಳು ತಿಳಿಸಿರುವುದಾಗಿ TMZ ಸ್ಪೋರ್ಟ್ಸ್ ವರದಿ ಮಾಡಿದೆ. ಹಲ್ಕ್ ಹೋಗಾನ್ ನಿಧನಕ್ಕೆ ಡಬ್ಲ್ಯೂ ಡಬ್ಲ್ಯೂಇ ಕುಟುಂಬ ಕಂಬನಿ ಮಿಡಿದಿದೆ.
ಕಳೆ ವಾರಗಳ ಹಿಂದಷ್ಟೇ ಹಲ್ಕ್ ಹೋಗಾನ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಹೃದಯ ಸಮಸ್ಯೆಯಿಂದ ವೈದ್ಯರು ಯಶಸ್ವಿಯಾಗಿ ಹಾರ್ಟ್ ಸರ್ಜರಿ ಮಾಡಿದ್ದರು. ಈ ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದ ಹಲ್ಕ್ ಹೋಗನ್, ಇದೀಗ ಮತ್ತೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಲ್ಕ್ ಹೋಗಾನ್ 80-90ರ ದಶಕದಲ್ಲಿ WWE ರಸ್ಲಿಂಗ್ ರಿಂಗ್‌ನಲ್ಲಿ ಅಬ್ಬರಿಸಿದ ದಿಗ್ಗಜ. 6.7 ಅಡಿ ಎತ್ತರದ ಅಜಾನುಬಾಹು ಆಗಿದ್ದ ಹಲ್ಕ್ ಅವರ ಹ್ಯಾಂಡಲ್‌ಬಾರ್ ಮೀಸೆ ಮತ್ತು ಕುಸ್ತಿಯ ಶೈಲಿ ಜನಪ್ರಿಯವಾಗಿದ್ದವು.
ಹಲ್ಕ್ ಅವರ ಮೂಲ ಹೆಸರು ಟೆರಿ ಬೊಲಿ. ವಿಶ್ವ ರೆಸ್ಲಿಂಗ್ ಫೆಡರೇಷನ್ (ಡಬ್ಲ್ಯುಡಬ್ಲ್ಯುಎಫ್ ಈಗ ಡಬ್ಲ್ಯುಡಬ್ಲ್ಯುಇ) ಆಯೋಜಿಸುವ ಪ್ರೊ ರೆಸ್ಲಿಂಗ್‌ನಲ್ಲಿ 1979ರಲ್ಲಿ ಮೊದಲ ಬಾರಿಗೆ ಅವರು ಕಣಕ್ಕಿಳಿದಿದ್ದರು. ಆಗಿನ ಪ್ರಸಿದ್ಧ ಕುಸ್ತಿಪಟುಗಳಾದ ಆ್ಯಂಡ್ರೆ ದ ಜೈಂಟ್ ಮತ್ತು ರಾಡಿ ಪೈಪರ್ ಅವರೊಂದಿಗೆ ಪೈಪೋಟಿ ನಡೆಸಿದ್ದರು.ಹಲ್ಕ್ ಅವರು ಡಬ್ಲ್ಯೂ ಡಬ್ಲ್ಯೂಇ ಕುಸ್ತಿ ಮಾತ್ರವಲ್ಲದೆ ಸಿನಿಮಾ ಮತ್ತು ಕಿರುತೆರೆ ಮೂಲಕವೂ ಜನಪ್ರಿಯರಾಗಿದ್ದರು. ‘ರಾಕಿ 3‘, ನೋ ಹೋಲ್ಡ್ಸ್ ಬಾರ್‌ಡ್‘ ಚಿತ್ರಗಳು ಮತ್ತು ‘ಬೇ ವಾಚ್’ ಟಿ.ವಿ. ಶೋನಲ್ಲಿ ಅವರು ನಟಿಸಿದ್ದರು.
