ಮಧುಗಿರಿ :
ಪಟ್ಡಣದ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಸಮೀಪವಿರುವ ಇತಿಹಾಸ ಪ್ರಸಿದ್ದ ಶ್ರೀ ವೀರಾಂಜನೇಯ ಸ್ವಾಮಿಯ ಹುಂಡಿಯಲ್ಲಿನ ಹಣ ಎಣಿಕೆ ಕಾರ್ಯವು ಶುಕ್ರವಾರದಿಂದ ಭರದಿಂದ ಸಾಗಿದೆ.
ಕಳೆದ ಎರಡು ವರ್ಷಗಳ ನಂತರ ಹುಂಡಿಯ ಎಣಿಕೆಯ ಕಾರ್ಯವು ಭರದಿಂದ ಸಾಗಿದ್ದು ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಂದಾಜು ಎರಡು ಲಕ್ಷ ರೂಗಳನ್ನು ಎಣಿಕೆ ಮಾಡಲಾಗಿದ್ದು ಆರ್ ಐ ನಾಗೇಶ್ ರವರ ನೇತೃತ್ವದಲ್ಲಿ ಮುಂದುವರೆದಿದ್ದು ಸಂಜೆ ನಂತರ ಸ್ಪಷ್ಡವಾದ ಮಾಹಿತಿ ಲಭ್ಯವಾಗಲಿದೆ.
ಇತಿಹಾಸ ಪ್ರಸಿದ್ಧವಾಗಿರುವ ಈ ದೇವಾಲಯದಲ್ಲಿನ ವೀರಾಂಜನೇಯ ಸ್ವಾಮಿಯ ಬಳಿ ಬರುವ ಭಕ್ತಾಧಿಗಳು ಸ್ವಾಮಿಯ ಬಳಿ ಬಂದು ನಾನ ರೀತಿಯ ಹರಕೆಗಳ ಮೂಲಕ ತಮ್ಮ ಇಷ್ಡಾರ್ಥಗಳನ್ನು ನೇರೆವೇರಿಸಿಕೊಳ್ಳುತ್ತಿದ್ದಾರೆ ಹಾಗೂ ಪ್ರತಿ ವರ್ಷವು ಸ್ವಾಮಿ ಆರಾಧನೆಯನ್ನು ಸ್ಥಳೀಯರೆಲ್ಲಾರೂ ಸೇರಿ ಬಹಳ ವಿಜೃಂಜಣೆಯಿಂದ ಆಚರಿಸುತ್ತಿದ್ದು ಭಕ್ತಾಧಿಗಳ ಸಂಖ್ಯೆ ದಿನೆ ದಿನೇ ಹೆಚ್ಚಳವಾಗುತ್ತಿದೆ ಎಂದು ಮೆಡಿಕಲ್ ಮಾಲೀಕ ಗಿರೀಶ್ ತಿಳಿಸಿದ್ದಾರೆ.
ಎಣಿಕೆ ಕಾರ್ಯದಲ್ಲಿ ಎಸ್ ಬಿ ಐ ಬ್ಯಾಂಕ್ ನ ಶಿವಾಜಿರಾಂ, ಕಂದಾಯ ಇಲಾಖೆಯ ರಮೇಶ್, ಪರಮೇಶ್ ,ಮಧು, ಕಾವ್ಯ, ಪವಿತ್ರ, ಓಬಳೇಶ್, ಕೋಟಪ್ಪ, ನಾಗರಾಜು, ಕೆಂಚರಾಜು, ಗಂಗರಾಜು ಆಚರ್ಕಕರಾದ ನಂಜುಂಡರಾವ್ ಮತ್ತಿತರರು ಇದ್ದರು.
