ಭಟ್ಕಳ:
ತಾಲೂಕಿನ ಶ್ರೀ ಕಂಚಿಕಾ ದುರ್ಗಾಪರಮೇಶ್ವರಿ ದೇವಾಲಯದ ಹುಂಡಿ ಕಳ್ಳತನ ಮಾಡಿದ್ದ ಚೋರರನ್ನು ಒಂದೇ ದಿನದಲ್ಲಿ ಭಟ್ಕಳ ಪೊಲೀಸ್ ತಂಡ ಬಂಧಿಸುವಲ್ಲಿ ಯಶ ಕಂಡಿದ್ದಾರೆ.ಆಗಸ್ಟ್ 28ರ ಮಧ್ಯರಾತ್ರಿಯಿಂದ 29ರ ಬೆಳಗಿನ ಜಾವದ ನಡುವಿನ ಅವಧಿಯಲ್ಲಿ ಹುಂಡಿ ಕಳ್ಳತನ ಮಾಡಿದ್ದ ಆರೋಪಿಗಳಾದ ಭಟ್ಕಳ ತಾಲೂಕಿನ ಕಾರಗದ್ದೆಯ ದರ್ಶನ ಮಂಜುನಾಥ ನಾಯ್ಕ್ ಹಾಗೂ ಭಟ್ಕಳ ಶಿರಾಲಿಯ ನಾರಾಯಣ ನಾಗಪ್ಪ ಗುಡಿಹಿತ್ತಲ ಎಂಬಿಬ್ಬರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಬಂಧಿತ ಚೋರರಿಂದ ಮೋಟರ್ ಸೈಕಲ್ ಸೇರಿದಂತೆ 1. 20 ಲಕ್ಷ ರೂಪಾಯಿ ಬೆಲೆಯ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,ಭಟ್ಕಳ ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
