ಬೆಂಗಳೂರು:
ರಾಜ್ಯ ವ್ಯಾಪ್ತಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಗೆ ಒಳಗಾಗಿದ್ದ 18 ಸರ್ಕಾರಿ ಅಧಿಕಾರಿಗಳ ಆದಾಯಕ್ಕಿಂತ ನೂರಾರು ಪಟ್ಟು ಆಕ್ರಮ ಸಂಪತ್ತು ಗಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್ ನಾಗೇಂದ್ರ (ಶೇ.929) ಅತಿ ಹೆಚ್ಚು ಆಕ್ರಮ ಆಸ್ತಿ ಹೊಂದಿದ್ದರೆ, ಮಂಗಳೂರಿನ ಕೆಪಿಟಿಎಸ್‌ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಯಾಳು ಸುಂದರ್ ರಾಜ್ (ಶೇ.55.10) ಕಡಿಮೆ ಅಕ್ರಮ ಸಂಪತ್ತು ಗಳಿಸಿದ್ದಾರೆ. ಉಳಿದಂತೆ ಎಲ್ಲ ಅಧಿಕಾರಿಗಳ ಆದಾಯ ನೂರಾರು ಪಟ್ಟು ಏರಿಕೆ ಆಗಿದೆ.
ಆರೋಪಿತ ಅಧಿಕಾರಿಗಳ ಆಸ್ತಿ, ಚಿನ್ನಾಭರಣ, ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಹೀಗಾಗಿ ಮುಂದಿನ ಹಂತದಲ್ಲಿ ಆರೋಪಿಗಳ ಆಕ್ರಮ ಆಸ್ತಿ ಮೌಲ್ಯವು ಹೆಚ್ಚಾಗಬಹುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ.ಶಿವಕುಮಾರ್ (ಶೇ.300), ಸಾರಿಗೆ ಇಲಾಖೆ (ರಸ್ತೆ ಸುರಕ್ಷತೆ) ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ (ಶೇ.121), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಯೋಜನೆ ನಗರ) ಉಪ ನಿರ್ದೇಶಕರ ವಿ.ರಾಕೇಶ್ ಕುಮಾರ್ (ಶೇ.131), ಯಾದಗಿರಿ ಜಿಲ್ಲೆ ಆರ್‌ಎಫ್‌ಓ (ಸಾಮಾಜಿಕ ಅರಣ್ಯ) ರಮೇಶ್ ಕನಕಟ್ಟೆ (ಶೇ.382.01),
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಜಿಆರ್‌ಎಸ್ ಕೌಜಲಗಿ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವರಾಜ ಶೇಖರ್ ರೆಡ್ಡಿ ಪಾಟೀಲ್ (ಶೇ.174.47), ಗದಗ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್ ಬಸವಕುಮಾರ್ ಎಸ್. ಅಣ್ಣಿಗೇರಿ (ಶೇ.190), ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿವಾನಂದ ಅಲಿಯಾಸ್ ಪೀರಪ್ಪ ಶರಣಪ್ಪ ಕೇದಗಿ (ಶೇ.325),
‘ವಂಶ ರಾಜಕಾರಣ’ಕ್ಕೆ ‘ಪ್ರಧಾನಿ ಮೋದಿ’ ಬ್ರೇಕ್: ‘ರಾಜ್ಯ ಕೇಸರಿಪಡೆ’ಯಲ್ಲಿ ಹೆಚ್ಚಿದ ಆತಂಕ.!
ಮೈಸೂರು ನಗರ ವಿಜಯನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಚ್.ಎನ್. ಬಾಲಕೃಷ್ಣಗೌಡ (ಶೇ.129.42), ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವೃತ್ತ ಅಬಕಾರಿ ಇನ್‌ಸ್ಪೆಕ್ಟರ್ ಚೆಲುವರಾಜು (ಶೇ.256), ರಾಮನಗರ ಉಪ ವಿಭಾಗದ ಎಸಿ ಸಿ.ಮಂಜುನಾಥ್ (ಶೇ.216.25), ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು (ಮೂಲಸೌಕರ್ಯ) ಎ. ಶ್ರೀನಿವಾಸ್ (ಶೇ.222.082), ಚಿಕ್ಕಮಗಳೂರು ಪಿಡಬ್ಲುೃಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಎಚ್.ಗವಿರಂಗಪ್ಪ (ಶೇ.81),
ಕೊಪ್ಪಳ ಜಿಲ್ಲೆ ಯಲಬುರ್ಗದ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ (ಶೇ.200.14), ರಾಯಚೂರು ಜಿಲ್ಲೆ ದೇವದುರ್ಗದ ಕೃಷ್ಣ ಭಾಗ್ಯ ಜಲ ನಿಗಮದ ಎಇಇ ಅಶೋಕ ರೆಡ್ಡಿ ಪಾಟೀಲ್ (ಶೇ.164.19), ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್. ಮಹೇಶ್ವರಪ್ಪ (ಶೇ.198.15), ಹಾವೇರಿ ಜಿಲ್ಲೆ ಎಪಿಎಂಸಿ ಉಪ ವಿಭಾಗದ ಎಇಇ ಕೃಷ್ಣ ಕೇಶಪ್ಪ ಆರೇರ (ಶೇ.184.71) ಅಕ್ರಮ ಆಸ್ತಿ ಸಂಪತ್ತು ಹೊಂದಿದ್ದಾರೆ ಎಂದು ಎಸಿಬಿ ವಿವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ