ಮಕ್ಕಳಿದ್ದರೂ ಪತ್ನಿಗೆ ಪ್ರಿಯಕರನದ್ದೇ ಚಿಂತೆ, ನೊಂದು ನೇಣಿಗೆ ಶರಣಾದ ಪತಿ!

ದಾವಣಗೆರೆ: 

   ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದಾವಣೆಗರೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 37 ವರ್ಷದ ಬಸವರಾಜ್ ಎಂದು ಗುರುತಿಸಲಾಗಿದೆ. ಡೆಟ್ ನೋಟ್ ಬರೆದಿಟ್ಟು ಬಸವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆಟ್ ನೋಟ್ ನಲ್ಲಿ ನನ್ನ ಸಾವಿಗೆ ನನ್ನ ಪತ್ನಿ ಉಮಾ ಹಾಗೂ ಆಕೆಯ ಪ್ರಿಯಕರ ಕಾರಣ. ಇಬ್ಬರು ಕಠಿಣ ಶಿಕ್ಷೆಯಾಗಲಿದೆ. ನನ್ನಿಬ್ಬರು ಮಕ್ಕಳನ್ನು ನನ್ನ ಸಹೋದರಿಗೆ ನೀಡಿ ಎಂದು ಬರೆದಿದ್ದಾರೆ.

   ಬಸವರಾಜ್ ಮತ್ತು ಉಮಾ ಮದುವೆಯಾಗಿ ಆರು ವರ್ಷಗಳಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗಿದ್ದರೂ ಉಮಾ ಪ್ರಿಯಕರನ ಸಹವಾಸ ಮುಂದುವರೆಸಿದ್ದಳು. ಅವನ ಸಹವಾಸ ಬಿಟ್ಟುಬಿಡು ಎಂದು ಎಷ್ಟೇ ಹೇಳಿದರೂ ಕೇಳದೆ ಅವನ ಜೊತೆ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಹೀಗಾಗಿ ಮನನೊಂದು ಬಸವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಪ್ರಕರಣ ಸಂಬಂಧ ಪೊಲೀಸರು ಉಮಾಳನ್ನು ಬಂಧಿಸಿದ್ದು ಆಕೆಯ ಪ್ರಿಯಕರನಿಗಾಗಿ ಶೋಧ ನಡೆಸಿದ್ದಾರೆ.

Recent Articles

spot_img

Related Stories

Share via
Copy link