ಕೊಡಿಗೇನಹಳ್ಳಿ:
ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮಪಂಚಾಯಿತಿ ಐಡಿಹಳ್ಳಿಯ ಸುರೇಶ್ ರವರ ಗುಡಿಸಲು ಬೆಂಕಿಗೆ ಆಹುತಿ. ತಕ್ಷಣ ಸ್ಥಳಿಯರ ಸಹಾಯದಿಂದ ಆಗ್ನಿ ನಂದಿಸಲು ಪ್ರಯತ್ನ ಹಾಗೂ ಮಧುಗಿರಿ ಆಗ್ನಿ ಶಾಮಕದಳ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸಿದ ಘಟನೆ ಶುಕ್ರವಾರ ನಡೆದಿದೆ ಎಂದು ಗುಡಿಸಲು ಮಾಲಿಕ ಸುರೇಶ್ ತಿಳಿಸಿದರು
ಮಧ್ಯಾಹ್ನ ಸುಮಾರು 1.30 ಕ್ಕೆ ನಿಮ್ಮ ವೇವಿನ ಬಣವೆ-ಗುಡಿಸಿಲಿಗೆ ಬೆಂಕಿ ಬಿದ್ದಿರುವುದಾಗಿ ಸಾರ್ವಜನಿಕರು ತಿಳಿಸಿದರು ಸ್ಥಳಕ್ಕೆ ಹೊಗುವಷ್ಠರಲ್ಲಿ ಗುಡಿಸಲಿನಲ್ಲಿ ಇದ್ದ ಪಾತ್ರೆ, ಬಟ್ಟೆ, ಆಹಾರ ದಿನಸಿ ಸುಟ್ಟು ಕರಕಲಾಗಿದೆ. ಗುಡಿಸಲಿನಲ್ಲಿ ಕಟ್ಟಿಹಾಕಿದ್ದ ಒಂದು ಹೆಣ್ಣು ಕರು ಸುಟ್ಟು ಕರಕಲಾಗಿದ ಸುಮಾರು 5 ಲೋಡ್ ಮೇವು ಸುಟ್ಟುಹೊಗಿದೆ ಎಂದು ತಿಳಿಸಿದರು.ಸ್ಥಳಕ್ಕೆ ಐಡಿಹಳ್ಳಿ ಗ್ರಾ.ಪಂ ಅಧ್ಯಕ್ಷ ನರಸಿಂಹರೆಡ್ಡಿ, ಪಿಡಿಓ ಪ್ರಕಾಶ್ ಬೇಟಿ ನಿಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ