ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದವ ಸೇರಿದ್ದು ಮಸಣಕ್ಕೆ

ನವದೆಹಲಿ: 

    ಹುಟ್ಟುಹಬ್ಬದ  ಸಂಭ್ರಮದಲ್ಲಿದ್ದ ಯುವಕನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ದೆಹಲಿಯ  ಶಹದಾರಾ  ಜಿಲ್ಲೆಯಲ್ಲಿ ನಡೆದಿದೆ. ಗಗನ್ (27) ಕೊಲೆಯಾದ ಯುವಕ. ಮನೆಯಲ್ಲೇ ಆತನ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಆತನ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಶಹದಾರ ಉಪ ಪೊಲೀಸ್ ಆಯುಕ್ತರು, ಫರ್ಶ್ ಬಜಾರ್ ಮತ್ತು ಶಹದಾರ ಠಾಣೆಗಳ ಸ್ಟೇಷನ್ ಹೌಸ್ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

   ಗಗನ್ ಮನೆಯಲ್ಲೇ ಶುಕ್ರವಾರ ಮಧ್ಯರಾತ್ರಿ ಆತನ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಮನೆಗೆ ಬಂದ ಸ್ನೇಹಿತನನ್ನು ಬರಮಾಡಿಕೊಳ್ಳಲು ಹೋದ ಗಗನ್ ತಲೆಗೆ ಅನಿರೀಕ್ಷಿತವಾಗಿ ಗುಂಡು ಹಾರಿಸಲಾಗಿದೆ. ಈ ಘಟನೆ ನಡೆಯುವ ಕೆಲಕ್ಷಣಗಳ ಮೊದಲು ಗಗನ್ ತನ್ನ ಸ್ನೇಹಿತನನ್ನು ಅಪ್ಪಿಕೊಂಡಿದ್ದಾನೆ. ಗಗನ್ ತಲೆಗೆ ಗುಂಡು ತಾಗಿದ ಮೇಲೆ ದಾಳಿಕೋರ ಮತ್ತೆ ಎರಡು ಹೆಚ್ಚುವರಿ ಗುಂಡನ್ನು ಗಾಳಿಯಲ್ಲಿ ಹರಿಸಿದ್ದಾನೆ ಎಂದು ಆತನ ತಂದೆ ವಿನೋದ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. 

    ಹತ್ತು ದಿನಗಳ ಮೊದಲು ಮಗ ತಂದೆಯಾದ ಖುಷಿಯಲ್ಲಿದ್ದ. ಘಟನೆ ನಡೆದ ತಕ್ಷಣವೇ ಆತನನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ  ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಶಹದಾರಾ ಡಿಸಿಪಿ, ಫರ್ಶ್ ಬಜಾರ್ ಮತ್ತು ಶಹದಾರಾ ಪೊಲೀಸ್ ಠಾಣೆಗಳ ಎಸ್‌ಎಚ್‌ಒ, ಅಪರಾಧ ತಂಡ ಮತ್ತು ಎಫ್‌ಎಸ್‌ಎಲ್ ತಂಡದ ಉನ್ನತ ಅಧಿಕಾರಿಗಳು ಸೇರಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಗಗನ್ ಮನೆಗೆ ಹತ್ತಿರದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸ್ಥಳೀಯರ ವಿಚಾರಣೆಯನ್ನೂ ನಡೆಸುತ್ತಿದ್ದಾರೆ.

    ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಹುಟ್ಟುಹಬ್ಬದ ಆಚರಣೆಗೆ ಕೆಲವು ಕ್ಷಣಗಳ ಮೊದಲು ನಡೆದ ಈ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಉದ್ವಿಗ್ನತೆಯನ್ನು ಉಂಟುಮಾಡಿದೆ. ತನಿಖೆಯ ಕಾರಣದಿಂದ ಗಗನ್ ಸ್ನೇಹಿತರ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಸ್ನೇಹಿತರ ನಡುವಿನ ವೈಮನಸ್ಸು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. 

    ಪಶ್ಚಿಮ ದೆಹಲಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕನನ್ನು ಶುಕ್ರವಾರ ಬಂಧಿಸಲಾಗಿದೆ. ಮೋತಿ ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಟಾಟಾ ಟಿಯಾಗೊ ಕಾರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿಯಾಗಿತ್ತು. ಅಪಘಾತಕ್ಕೆ ಕಾರಣವಾದ 20 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಬುಧವಾರ ಸಂಜೆ ಜನನಿಬಿಡ ಜಖಿರಾ ಗೋಲ್ ಚಕ್ಕರ್‌ನಲ್ಲಿ ವೇಗವಾಗಿ ಬಂದ ಕಾರು ನೆಹರು ನಗರದ ಪೇಂಟರ್ ಮುನ್ನಿ ರಾಜ್ (48) ಮತ್ತು ಜಖಿರಾದ ವ್ಯಾಪಾರಿ ಸೂರಜ್‌ಪಾಲ್ (74) ಎಂಬವರಿಗೆ ಡಿಕ್ಕಿಯಾಗಿತ್ತು. ತಕ್ಷಣವೇ ಅವರನ್ನು ಎಬಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳು ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. 

    ಸ್ಥಳದಲ್ಲೇ ಬಿಟ್ಟು ಹೋಗಿದ್ದ ಕಾರಿನ ಕುರಿತು ಮಾಹಿತಿ ಪತ್ತೆ ಹಚ್ಚಿದ ಪೊಲೀಸರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣದ ಸೋನಿಪತ್‌ನ ಸಂಜಯ್ ಕುಮಾರ್‌ ಎಂಬವರ ಮಗ ಸುಮಿತ್ ಕಾರನ್ನು ಚಾಲನೆ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದು ಆತನನ್ನು ಸೆಕ್ಟರ್ -12ರಲ್ಲಿ ಬಂಧಿಸಿದ್ದಾರೆ. ಸುಮಿತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

   ಸುಮಿತ್ ಬಳಿ ಚಾಲನಾ ಪರವಾನಿಗೆ, ವಿಮೆ ಇಲ್ಲದ ಕಾರಣ ಅವನಿಗೆ ಕಾರು ಚಾಲನೆ ಮಾಡಲು ಅನುಮತಿ ನೀಡಿದ್ದಕ್ಕಾಗಿ ಆತನ ತಂದೆ ಮತ್ತು ಕಾರು ಮಾಲೀಕ ಸಂಜಯ್ ವಿರುದ್ಧ ಸೆಕ್ಷನ್ 5/180 ಮತ್ತು 146/196ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Recent Articles

spot_img

Related Stories

Share via
Copy link