ಹ್ಯುಂಡೈ
ಕಂಪನಿಯ ಪ್ರಸಿದ್ದ ಸೆವೆನ್ ಸೀಟರ್ ಕಾರಾದ ಅಲ್ಕಾಜರ್ ಬಹುತೇಕರ ಅಚ್ಚು ಮೆಚ್ಚಿನ ಕಾರು. ವೈಯಕ್ತಿಕ ಬಳಕೆಗಾಗಿ ಈ ಒಂದು ಸೆವೆನ್ ಸಿಟರ್ ಪರ್ಫೆಕ್ಟ್ ಫ್ಯಾಮಿಲಿ ಕಾರು ಬೇಕೆಂದರೆ ಅಂತಹವರಿಗೆ ಹ್ಯುಂಡೈ ಕಂಪನಿಯ ಅಲ್ಕಾಜರ್ ಪರ್ಫೆಕ್ಟ್ ಕಾರು. ಈ ಕಾರಿನ ಫೇಸ್‌ಲಿಫ್ಟ್ ಸದ್ಯದಲ್ಲೇ ಕಾಲಿಡುವುದರಲ್ಲಿತ್ತು.
ಮಾಹಿತಿಗಳ ಪ್ರಕಾರ ಈ ಕಾರಿನ ಫೇಸ್‌ಲಿಫ್ಟ್ ಮಾದರಿ ಜೂನ್ ನಲ್ಲಿ ಲಾಂಚ್ ಆಗುವುದರಲ್ಲಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಈ ಕಾರಿನ ಫೇಸ್‌ಲಿಫ್ಟ್ ಲಾಂಚ್ ಮುಂದಕ್ಕೆ ಹಾಕಲಾಗಿದೆ. ಮೂಲಗಳ ಪ್ರಕಾರ ಈಗಿರುವ ಅಲ್‌ಕಜಾರ್ ಕಾರು ಮಾದರಿಯ ಸ್ಟಾಕ್ ಮುಗಿದ ನಂತರ ಹೊಸ ಫೇಸ್‌ಲಿಫ್ಟ್ ಅನ್ನು ಹ್ಯುಂಡೈ ರಸ್ತೆಗಿಳಿಸಲಿದೆ.
ಮಾಹಿತಿಗಳ ಪ್ರಕಾರ ಹೊಸ ಫೇಸ್‌ಲಿಫ್ಟ್ ಅಲ್ಕಜಾರ್‌ನ ಎಂಜಿನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ. ಬಹುತೇಕ ಹಳೆಯ ಕಾರಿನಲ್ಲಿದ್ದ ಎಂಜಿನ್ ಅನ್ನೇ ಉಳಿಸಿಕೊಂಡು ಹೋಗಲಿದೆ. ಆದರೆ ಡಿಸೈನ್ ಮತ್ತು ಫೀಚರ್‌ನಲ್ಲಿ ಬದಲಾವಣೆಗಳು ಇರಲಿದ್ದು, ಈ ಕಾರು ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಮಾದರಿಯನ್ನೇ ಅವಲಂಬಿಸಲಿದೆ ಎಂದು ತಿಳಿದು ಬಂದಿದೆ.
ಈ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಎಸ್‍ಯುವಿ ಅದೇ ಹೊಸ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಸ್‍ಯುವಿಯಿಂದ ಹಿಂದಿನ ನವೀಕರಣದಲ್ಲಿ ಹಳೆಯ 2.0-ಲೀಟರ್ ನ್ಯಾಚುರಲ್-ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಅನ್ನು ತೆಗೆದು ಹಾಕಿದೆ. ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 158 bhp ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಒಳಗಿನ ಬದಲಾವಣೆಗಳು ಹೊಸ ಕ್ರೆಟಾದಲ್ಲಿ ಕಂಡುಬರುವಂತೆಯೇ ಇರುತ್ತದೆ. ಅಲ್ಕಾಜರ್ ಫೇಸ್‌ಲಿಫ್ಟ್ ಡ್ಯುಯಲ್ 10.25-ಇಂಚಿನ ಮನಬಂದಂತೆ ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಸ್ಕ್ರೀನ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಇನ್ಸ್ ಟ್ರೂಮೆಂಟ್ ಡ್ಯುಯಲ್-ಝೋನ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಮೆಂಟಿಕೆಟಡ್ ಸೀಟುಗಳನ್ನು ಒಳಗೊಂಡಿರುತ್ತದೆ. ಅಲ್ಕಾಜರ್ ಫೇಸ್‌ಲಿಫ್ಟ್‌ನೊಂದಿಗೆ ADAS ಫೀಚರ್ಸ್ ಹೊಂದಿರಲಿದೆ.
ಈ 1.5 ಲೀಟರ್ ಪೆಟ್ರೋಲ್ ಎಂಜಿನ್ RDE (ರಿಯಲ್ ಡ್ರೈವಿಂಗ್ ಎಮಿಷನ್) ಕಂಪ್ಲೈಂಟ್ ಮತ್ತು E20 (ಎಥೆನಾಲ್) ಇಂಧನವನ್ನು ಸಹ ಬೆಂಬಲಿಸುತ್ತದೆ. ಈ ಎಂಜಿನ್ ಆಯ್ಕೆಗಳಲ್ಲಿ 6-ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಹೊಸ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಮತ್ತು DCT ಆಗಿದೆ. ಈ ಎಂಜಿನ್ ಇಂಟಿಗ್ರೇಟೆಡ್ ಸ್ಟಾರ್ಟ್-ಸ್ಟಾಪ್ ಟೆಕ್ ಅನ್ನು ಸಹ ಪಡೆಯುತ್ತದೆ. DCT ಆವೃತ್ತಿಯು 18 ಕಿ.ಮೀ ಮೈಲೇಜ್ ನೀಡುತ್ತದೆ.
ಇದರ ಮ್ಯಾನುವಲ್ ಆವೃತ್ತಿಯು 17.5 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ನೀಡಿದೆ. ಈ ಎಂಜಿನ್ 115 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನ್ವಟರ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ