ಬೆಂಗಳೂರು:
ಕರ್ನಾಟಕದ ಮೈಸೂರು ಮೂಲದ ನೃತ್ಯ ಸಂಯೋಜಕ, ನಿರ್ದೇಶಕ ಮತ್ತು ನಟ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 2020 ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ.
50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು, ತುಂಬಾ ಸಂತೋಷ ಮತ್ತು ಸಂಪೂರ್ಣತೆಯ ಭಾವ ಆವರಿಸಿದೆ ಎಂದು ಹೇಳಿದ್ದಾರೆ. ಇದು ಪ್ರಭು ಕುಟುಂಬದ ಮೊದಲ ಹೆಣ್ಣು ಮಗು, ಅವರು ಹಿಂದೆ ಮದುವೆಯಾಗಿದ್ದ ಪತ್ನಿಗೆ ಮೂವರು ಗಂಡು ಮಕ್ಕಳಿದ್ದಾರೆ.
ಸಾಧ್ಯವಾದಷ್ಟು ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೇನೆ. ಈಗಾಗಲೇ ನನ್ನ ಕೆಲಸದ ಹೊರೆಯನ್ನು ಕಡಿಮೆ ಮಾಡಿದ್ದೇನೆ. ನನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಭು ತಮ್ಮ ಸಮಯವನ್ನು ಮುಂಬೈ ಮತ್ತು ಚೆನ್ನೈ ನಡುವೆ ಹಂಚಿಕೆ ಮಾಡಿದ್ದಾರೆ. ಅವರು ಎರಡೂ ನಗರಗಳಲ್ಲಿ ನಿರ್ದೇಶಕ ಮತ್ತು ನಟರಾಗಿ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
