ನಾನು ಪಕ್ಷದ ‘ರಚನಾತ್ಮಕ ಕಾರ್ಯಕರ್ತ’ : ವಿ ಸೋಮಣ್ಣ

ಬೆಂಗಳೂರು:

     ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಪಕ್ಷದೊಳಗೆ ಅಥವಾ ಹೊರಗಿನವರ ಕೈಗೊಂಬೆಯಂತೆ ವರ್ತಿಸಲು ನನಗೆ ಸಾಧ್ಯವಿಲ್ಲ. ಏಕೆಂದರೆ, ನಾನು ಪಕ್ಷದ ‘ರಚನಾತ್ಮಕ ಕಾರ್ಯಕರ್ತ’ ಎಂದು ಬಿಜೆಪಿ ಹಿರಿಯ ಮುಖಂಡ ವಿ ಸೋಮಣ್ಣ ಬುಧವಾರ ದೃಢಪಡಿಸಿದರು.

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ‘ಅವಳಿ ಸೋಲಿನ ಆಘಾತದಿಂದ ನಾನು ಇನ್ನೂ ಹೊರಬಂದಿಲ್ಲ’ ಎಂದರು.
    ‘ನನ್ನ ಉಭಯ ಸೋಲು ನನಗೆ ಅನೇಕ ವಿಷಯಗಳನ್ನು ಕಲಿಸಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ನಾನಿನ್ನು ಯಾರ ಕೈಗೊಂಬೆಯಲ್ಲ ಎಂದು ನಿಮಗೆ (ಮಾಧ್ಯಮಗಳಿಗೆ) ಹೇಳುತ್ತೇನೆ’ ಎಂದು ಅವರು ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
    ‘ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಹಿಟ್ ಆ್ಯಂ‌ಡ್ ರನ್ ಮಾಡಲು ನಾನು ರೆಡಿ ಇಲ್ಲ. ಈ ಬಗ್ಗೆ ಪಕ್ಷದ ಮುಖಂಡರ ಬಳಿ ಮಾಹಿತಿ ಪಡೆಯುತ್ತೇನೆ. ಒಬ್ಬ ಸೀನಿಯರ್ ಆಗಿ ಮಾಹಿತಿ ಇಲ್ಲದೇ ಮಾತನಾಡುವುದಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಪ್ರತಿಕ್ರಿಯಿಸಿದರು.
    ‘ನಾನು ಮತ್ತು ಬೊಮ್ಮಾಯಿ ಸ್ನೇಹಿತರು. ಅವರ ತಂದೆ ದಿವಂಗತ ಎಸ್‌ಆರ್ ಬೊಮ್ಮಾಯಿಯವರ ಗರಡಿಯಲ್ಲಿ ಬೆಳೆದವನು ನಾನು. ಬೊಮ್ಮಾಯಿ ಅವರನ್ನು ಭೇಟಿ ಮಾಡದೇ ಬಹಳ ದಿನಗಳಾಗಿತ್ತು. ಹೀಗಾಗಿ, ಅವರನ್ನು ಭೇಟಿ ಮಾಡಲು ಬಂದಿದ್ದೆ. ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ’ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap