ಕೆಲವರ ನೋವು ನನಗೆ ಅರ್ಥವಾಗುತ್ತದೆ : ಮೋದಿ

ನವದೆಹಲಿ:

    ವಿಶ್ವದ ಅತಿ ದೊಡ್ಡ ಚುನಾವಣಾ ಪ್ರಚಾರದಲ್ಲಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ ಮತ್ತು ಕೆಲವರ ನೋವು ನನಗೆ ಅರ್ಥವಾಗುತ್ತದೆ. ನಿರಂತರವಾಗಿ ಸುಳ್ಳುಗಳನ್ನು ಹಬ್ಬಿಸಿದರೂ, ಅವರು ಸೋಲು ಅನುಭವಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದರು.

   ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ನಿನ್ನೆ ಮತ್ತು ಇಂದು, ಹಲವಾರು ಸಂಸದರು ರಾಷ್ಟ್ರಪತಿಗಳ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರು ಸಂಸತ್ತಿನ ಎಲ್ಲಾ ನಿಯಮಗಳನ್ನು ಅನುಸರಿಸಿದರು ಮತ್ತು ಅವರ ನಡವಳಿಕೆಯು ಅನುಭವಿ ಸಂಸದರಂತೆಯೇ ಇತ್ತು. ಮೊದಲ ಬಾರಿಗೆ ಅವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ ಮತ್ತು ಈ ಚರ್ಚೆಯನ್ನು ಹೆಚ್ಚು ಮೌಲ್ಯಯುತವಾಗಿಸಿದ್ದಾರೆ ಎಂದರು.

   ತುಷ್ಟೀಕರಣ ರಾಜಕೀಯ ಮತ್ತು ಆಡಳಿತ ಮಾದರಿಯನ್ನು ದೇಶವು ದೀರ್ಘಕಾಲದವರೆಗೆ ನೋಡಿದೆ. ಆದರೆ ಇನ್ನು ಮುಂದೆ ತುಷ್ಟೀಕರಣ ನಡೆಯಲ್ಲ. ನಮ್ಮ ನೀತಿಯು ಯಾರನ್ನೂ ಓಲೈಸುವುದಲ್ಲ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಉತ್ತಮ ರೀತಿಯಲ್ಲಿ ಸಾರ್ವಜನಿಕ ಬೆಂಬಲವನ್ನು ಗಳಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

   ಕೇಂದ್ರದ ನೀತಿಗಳು ಮತ್ತು ಆಡಳಿತದ ಸೂತ್ರವೇ ದೇಶದ ಮೊದಲು ಎಂಬುದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯನ್ನು ಪುನರುಚ್ಚರಿಸಿದ ಮೋದಿ ಭ್ರಷ್ಟಾಚಾರದ ವಿರುದ್ಧ ಎನ್‌ಡಿಎ ಸರ್ಕಾರದ ಹೋರಾಟವನ್ನು ಎತ್ತಿ ತೋರಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಮಣಿಪುರಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ‘ಸರ್ವಾಧಿಕಾರವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗುತ್ತಾ, ಮಣಿಪುರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap