ನನಗೆ ರಾಜಕೀಯ ಗೊತ್ತಿಲ್ಲ :ಡಾಲಿ ಧನಂಜಯ

ಬೆಂಗಳೂರು: 

    ನಟ ಡಾಲಿ ಧನಂಜಯ್ ಕಾಂಗ್ರೆಸ್ ಪಕ್ಷ ಮೂಲಕ ರಾಜಕೀಯ ಪ್ರವೇಶಿಸುತ್ತಾರೆ, ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಸುದ್ದಿಯಾಗಿತ್ತು.

   ಇದಕ್ಕೆ ಸ್ಪಷ್ಟನೆ ನೀಡಿರುವ ನಟ ಡಾಲಿ ಧನಂಜಯ್, ನನಗೆ ರಾಜಕಾರಣ ಗೊತ್ತಿಲ್ಲ, ಸದ್ಯಕ್ಕೆ ನಾನು ಈ ಕ್ಷೇತ್ರಕ್ಕೆ ಬರಲ್ಲ. ಸಿನಿಮಾ ರಂಗದಲ್ಲಿ ಸಾಕಷ್ಟು ಕನಸು ಇದೆ ಅಲ್ಲೇ ಕೆಲಸ ಮಾಡ್ತೇನೆ ಎನ್ನುವ ಮೂಲಕ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

   ಶ್ರೀರಂಗಪಟ್ಟಣದಲ್ಲಿ ಈ ಬಗ್ಗೆ ಮಾತನಾಡಿದ ನಟ ಡಾಲಿ ಧನಂಜಯ್, ಕೆಲಸದ ನಿಮಿತ್ತ ನಾನು ಹೈದರಾಬಾದ್‌ನಲ್ಲಿದ್ದೆ, ಅಲ್ಲಿಗೆ ಹೋಗಿ ಬರುವಷ್ಟರಲ್ಲಿ ನನ್ನ ಎಲೆಕ್ಷನ್‌ಗೆ ನಿಲ್ಲಿಸಿ, ಟಿಕೆಟ್ ಕೊಡ್ಸಿರೋದು ನೀವು, ಈ ಬಗ್ಗೆ ಉತ್ತರ ನೀವೇ ಹೇಳಬೇಕು ಎಂದು ನಕ್ಕರು.

   ಯಾವುದೇ ಕೆಲಸ ಮಾಡಬೇಕಾದರೆ ಅದರಲ್ಲೆ ಮುಳಗಬೇಕು, ಶೇಕಡಾ 100ರಷ್ಟು ಶ್ರದ್ಧೆ, ಪ್ರಯತ್ನ ಹಾಕಲೇಬೇಕು, ಹಾಗಾದರೆ ಮಾತ್ರ ಅದರಲ್ಲಿ ಯಶಸ್ಸು ಸಿಗುವುದು. ನನ್ನ ಸಿನಿಮಾ, ಜನರ ಪ್ರೀತಿ ಸಿಕ್ಕಿರುವುದು ದೊಡ್ಡದು ಅದರಲ್ಲೇ ಇನ್ನು ತುಂಬಾ ಕೆಲಸ ಮಾಡುವುದಿದೆ. ಸಧ್ಯಕ್ಕೆ ಅದರ ಕಡೆಗೆ ಕೆಲಸ ಮಾಡ್ತಿದ್ದೇನೆ. ನಿಜವಾಗಿಯೂ ಇದರ ಯಾವುದರ ಬಗ್ಗೆಯೂ ಒಂದು ಚೂರು ಮಾಹಿತಿ ಇಲ್ಲ. ಯಾರಾದರೂ ಹೇಳಿದ್ದಾರಾ? ಇವನನ್ನು ಸಿನಿಮಾದಿಂದ ಆಚೆ ಕಳ್ಸಿ ಅಂತ. ಇಲ್ಲ ನಾನು ಸಿನಿಮಾ ಮಾಡ್ತೇನೆ, ನನ್ನದು ಕನಸಿದೆ. ನಟನಾಗಿ ತುಂಬಾ ಕನಸು ಕಟ್ಟಿಕೊಂಡು ಈ ಫೀಲ್ಡ್ ಗೆ ಬಂದಿದ್ದಿನಿ. ನಟನಾಗಿ, ನಿರ್ಮಾಪಕನಾಗಿ ಕೆಲಸ ಮಾಡಬಹುದಲ್ಲ, ರಾಜಕೀಯದಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.

   ಲಿಡ್ಕರ್ ಗೆ ಬ್ರಾಂಡ್ ರಾಯಭಾರಿ ಆಗಿರುವುದು, ಅದನ್ನು ನಂಬಿ ಸಾವಿರಾರು ಬಡ ಕುಟುಂಬಗಳು ಇವೆ. ಅದಕ್ಕೆ ನಾನು ಒಪ್ಪಿಕೊಂಡೆ. ಕಲಾವಿದರಾಗಿ ನಾವು ಎಮೊಷನಲ್ ಆಗಿರ್ತಿವಿ. ಪಾಲಿಟಿಕ್ಸ್ ಗೆ ಬೇಕಿರುವುದು ಬೇರೆ ಮೈಂಡ್ ಸೆಟ್. ರಾಜಕಾರಣ ಬೇರೆ ನಾಯಕನಾಗಿರುವುದು ಬೇರೆ ಅದರದೆ ಕ್ವಾಲಿಟಿಸ್ ಇರುತ್ತೆ. ರಾಜಕೀಯ ನಿಭಾಯಿಸುವ ಶಕ್ತಿ ಇರಬೇಕು ಎಂದಿದ್ದಾರೆ.

   ರಾಜಕೀಯಕ್ಕೆ ಸದ್ಯಕ್ಕೆ ನಾನು ಬರಲ್ಲ, ನನಗೆ ಎಲ್ಲಾ ಪಕ್ಷಗಳ ಸ್ನೇಹಿತರಿದ್ದಾರೆ. ಯಾರೇ ಕರೆದರು ನಾನು ಕ್ಯಾಂಪೇನ್ ಗಳಿಗೆ ಹೋಗಿಲ್ಲ. ನನಗೆ ಅದರಲ್ಲಿ ಇನ್ವಾಲ್ ಹಾಗೋಕೆ ಇಷ್ಟ ಇಲ್ಲ. ನಾನು ಕಾಮನ್ ಮ್ಯಾನ್ , ಕಾಮನ್ ಮ್ಯಾನ್ ಆಗಿಯೇ ಇರಲು ಇಷ್ಟ ಪಡ್ತೇನೆ. ಜೂನ್ ನಲ್ಲಿ ʻಕೋಟಿʼ ಅನ್ನೋ ಸಿನಿಮಾ ಬರಲಿದ್ದು, ಅದರಲ್ಲಿ ನಾನು ಕಾಮಾನ್ ಮ್ಯಾನ್ ಸಿನಿಮಾ ನೋಡಿ ತುಂಬಾ ಇಷ್ಟವಾಗುತ್ತೆ. ಖಂಡಿತವಾಗಿಯೂ ಎಂಪಿ ಚುನಾವಣೆ ಕ್ಯಾಂಪೇನ್ ಗೆ ಹೋಗುವ ಯೋಚನೆ ಮಾಡಿಲ್ಲ. ರಾಜಕಾರಣ ಗೊತ್ತಿಲ್ಲ ನನಗೆ, ಗುಡ್ ಲೀಡರ್ ಯಾರು ಅಂದ್ರೆ ಯಾವುದೇ ಪಕ್ಷದಲ್ಲಿರಲಿ ಕೆಳಗಿರುವವರನ್ನು ಮೇಲೆತ್ತುವವನೆ ಒಳ್ಳೆಯ ನಾಯಕ. ಅವರಿಗೆ ಸ್ಪಂದಿಸುವವರೆಲ್ಲರು ಒಳ್ಳೆಯ ಪ್ರಜೆಗಳೆ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap