ಹನಿ ಟ್ರಾಫ್ ಗೆ ಯಾರೂ ಒಳಗಾಗದಂತೆ ಕಳಕಳಿ ವಹಿಸಬೇಕೇ ಹೊರತು ಬೇರೆ ಉದ್ದೇಶ ನನಗಿಲ್ಲ : ರಾಜಣ್ಣ

ಮಧುಗಿರಿ:

    ಹನಿ ಟ್ರಾಫ್ ಗೆ ಯಾರೂ ಒಳಗಾಗದಂತೆ ಕಳಕಳಿ ವಹಿಸಬೇಕೇ ಹೊರತು ಬೇರೆ ಉದ್ದೇಶ ನನಗಿಲ್ಲ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರುಪಟ್ಟಣದ ತಾ.ಪಂ ಸಭಾಗಂಣಾದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು,48 ಜನರ ಹನಿ ಟ್ರಾಫ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಲ್ಲಿಸಲಾಗಿದ್ದ ಪಿ ಐ ಎಲ್ ಅರ್ಜಿಯು ವಜಾ ಗೊಂಡಿರುವ ಹಿನ್ನೆಯಲ್ಲಿ ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಎಲ್ಲಾರೂ ಪಾಲಿಸುವುದು ನಮ್ಮ ನೆಲದ ಕಾನೂನಾಗಿದೆ , ನನ್ನ ಮೇಲೆ ಹನಿ ಟ್ರಾಫ್ ಪ್ರಯತ್ನ ಆಗಿತ್ತು ಆದರೆ ಹನಿ ಟ್ರಾಫ್ ಗೆ ಒಳಗಾಗಿಲ್ಲ ಆದರೆ ಈ ರೀತಿ ಮಾಡಿರುವವರ ವಿರುದ್ಧ ತನಿಖೆ ಹಾಗೂ ಶಿಕ್ಷೆ ಆಗಬೇಕು ಬೇರೆಯವರಿಗೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸ ಬೇಕೆಂದರು.

   ಹನಿ ಟ್ರಾಫ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ರವರಿಗೆ ತಾವು ಮನವಿ ಸಲ್ಲಿಸಿದ್ದೀರಾ ಆದರೆ ಪೋನ್ ಟ್ಯಾಪಿಂಗ್ ವಿಷಯವಾಗಿ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಯಾವುದೇ ದೂರನ್ನು ದಾಖಲಿಸಿಲ್ಲಾವೆಂದಾಗ ನೀವು ಅವರು ಬಳಿಯೇ ಪ್ರಶ್ನಿಸಿ ಎಂದರು.