ಬಕೆಟ್‌ ಯಾರ್‌ ಹಿಡಿದಿದ್ದರು ಅಂತ ಗೊತ್ತು….: ಸಂಕಲ್ಫ ಶೆಟ್ಟರ್‌

ಹುಬ್ಬಳ್ಳಿ: 

    ಧಾರವಾಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಮುಖಂಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪುತ್ರ ಸಂಕಲ್ಪ ಸಾಮಾಜಿಕ ಜಾಲತಾಣದ ಮುಖಾಂತರ ವಾಗ್ದಾಳಿ ಆರಂಭಿಸಿದ್ದಾರೆ.

    ರಾಜ್ಯ ರಾಜಕಾರಣದಲ್ಲಿ ಈಗ ‘ಬಕೆಟ್’ ಎನ್ನುವ ಶಬ್ದ ಬಹಳವಾಗಿಯೇ ಕೇಳಿಬರುತ್ತಿದೆ ಇದಕ್ಕೆ ಕಾರಣ ಕಳೆದ ಬಾರಿ ನಡೆದ ವಿಧಾನಸಭೆ  ಚುನಾವಣೆಯಲ್ಲಿ ಬಹಳ ಜನ ಬಿಜೆಪಿ ಶಾಸಕರಿಗೆ ಟಿಕೆಟ್ ಕೈತಪ್ಪಿಸಿ ಹೊಸಬರಿಗೆ ಮಣೆ ಹಾಕಿರುವ ಹಿನ್ನೆಲೆಯಲ್ಲಿ ಈಗ ಹಲವಾರು ಬಿಜೆಪಿ ನಾಯಕರು ಸ್ವಪಕ್ಷದ ವಿರುದ್ದವೇ ತಿರುಗಿ ಬಿದ್ದಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ನಾಲ್ಕು ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೇಟ್ಟರ್ ಅವರು ಸ್ವಪಕ್ಷಿಯರ ವಿರುದ್ದ ಆರೋಪ ಮಾಡಿರುವುದು. ಬಿಜೆಪಿಯಲ್ಲಿ ಹಾಲಿ ನಾಯಕರಿಗೆ ಬಕೆಟ್ ಹಿಡಿದರೆ ಮಾತ್ರ ಪಕ್ಷದಲ್ಲಿ ಬೆಲೆ ಸಿಗುತ್ತದೆ ಹೊರತು ಕ್ಷೇತ್ರದಲ್ಲಿ ಮಾಡುವ ಅಭಿವೃದ್ದಿ ಕೆಲಸದಿಂದಲ್ಲ ಹಾಗೂ ಲಿಂಗಾಯತರಿಗೆ ಬಿಜೆಪಿ ಕಡೆಗಣಿಸುತ್ತಿರುವುದು ಬಹಳವಾಗಿ ಬೇಸರವಾಗಿದೆ ಎಂದು ಅಸಮಧಾನ ಹೊರಹಾಕಿದರು. ಇದಕ್ಕೆ ವಿರುದ್ದವಾಗಿ ಮಹೇಶ್ ಟೆಂಗಿನಕಾಯಿ ಸಹ ಪ್ರದೀಪ್ ಶೆಟ್ಟರ್ ಎಂದೂ ಇಲ್ಲದ ಜಾತಿಯ ಮೇಲಿನ ಅಭಿಮಾನ ಈಗೇಕೆ ಎಂದು ಶೆಟ್ಟರ್ ಗೆ ಟಾಂಗ್ ಕೊಟ್ಟಿದ್ದರು.

     ತೆಂಗಿನಕಾಯಿ ಟಾಂಗ್ ಕೊಟ್ಟಿರುವ ಬೆನ್ನಲ್ಲೆ ಪ್ರದೀಪ್ ಶೆಟ್ಟರ್ ಬೆನ್ನಿಗೆ ಅವರ ಅಣ್ಣ ಜಗದೀಶ್ ಶೆಟ್ಟರ ಅವರ  ಮಗನಾದ ಸಂಕಲ್ಪ ಶೇಟ್ಟರ್ ನಿಂತಿದ್ದಾರೆ. ಚಿಕ್ಕಪ್ಪನ ಬೆನ್ನಿಗೆ ನಿಂತ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ ಶೆಟ್ಟರ್ ಮಾತಿಗೆ ದನಿಗೂಡಿಸಿದ್ದಾರೆ. ಯಾರು ಬಕೆಟ್ ಹಿಡಿದು ಹು-ಧಾ ಸೆಂಟ್ರಲ್ ಬಿಜೆಪಿ ಟಿಕೆಟ್ ತಗೊಂಡಿದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ  ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಕಲ್ಪ ಶೆಟ್ಟರ್ ಬರೆದುಕೊಂಡು  ಪರೋಕ್ಷವಾಗಿ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಜಗದೀಶ್ ಶೆಟ್ಟರ್ ಗೂ ಟಿಕೆಟ್ ನಿರಾಕರಣೆ ಮಾಡಿದಾಗಲೂ ಏನೂ ಮಾತನಾಡದ ಸಂಕಲ್ಪ ಶೆಟ್ಟರ್ ಇದೀಗ ಪ್ರದೀಪ ಅಸಮಾಧಾನದ ಬೆನ್ನಲ್ಲೆ ಪೇಸಬುಕ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

   ಎರಡು ದಿನಗಳ ಹಿಂದಷ್ಟೇ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಪ್ರದೀಪ ಶೆಟ್ಟರ್ ಅವರು ಬಕೆಟ್ ಹಿಡಿದವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಆಪಾದನೆ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಪಕ್ಷದಲ್ಲಿ ನಿಷ್ಠಾವಂತರಿಗೆ ಆದ್ಯತೆ ನೀಡಲಾಗುತ್ತದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link