ಬೊಮ್ಮಾಯಿಯವರಿಗಷ್ಟೇ ನನ್ನ ಬೆಂಬಲ : ಸುದೀಪ್‌

ಬೆಂಗಳೂರು

ನಾನು ಚುನಾವಣೆಗೆ ಸ್ಪರ್ಧೆಮಾಡುವುದಿಲ್ಲ

      ಕನ್ನಡ ಸಿನಿಮಾ ಇಂಡಸ್ಟ್ರೀಯ ಕಿಚ್ಚಾ ಎಂದೇ ಪ್ರಸಿದ್ದರಾದ ಸುದೀಪ್‌ ಅವರು ಬಿಜೆಪಿ ಸೇರುತ್ತಾರೆ ಎಂಬ  ವದಂತಿಗಳ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸುದೀಪ್‌ ಅವರು ನನ್ನ ಬೆಂಬಲ  ಬಸವರಾಜ ಬೊಮ್ಮಾಯಿ ಅವರಿಗೆ ಅಷ್ಟೆ ನಾನು ಯಾವ ಪಕ್ಷಕ್ಕಲ್ಲ ಎಂದು ಸ್ಪಷ್ಠ ಪಡಿಸಿದ್ದಾರೆ.

    ನನಗೆ ಬೊಮ್ಮಾಯಿ ಅವರು ಮಾವ ಇದ್ದಾಗೆ ಅವರು ನನಗೆ ತುಂಬಾ ಬೇಕಾದವರು. ಹಾಗಾಗಿ ನನ್ನ ಬೆಂಬಲ ಇದ್ದೇ ಇದೆ. ಹಾಗಂತ ನಾನು ಯಾವುದೇ ಪಕ್ಷದವನು ಎಂದಲ್ಲ. ನನಗೆ ಚಿಕ್ಕ ವಯಸ್ಸಿನಿಂದಲೂ ಬೊಮ್ಮಾಯಿ ಮಾವ ಅವರನ್ನು ನೋಡಿಕೊಂಡು ಬಂದಿದ್ದಾನೆ. ಅವರು ನನ್ನ ಮಾಮ. ಅವರ ಪ್ರೀತಿಗೆ ನಾನು ಖುಣಿ ಅವರ ಪರ ನಾನು ಇದ್ದೇನೆ ಎಂದರು.

    ನಾನು ಬೆಳೆದು ಬಂದ ಹಾದಿಗಳಲ್ಲಿ ಗಾಡ್ ಫಾದರ್ ಅವರು. ನನ್ನ ಜೊತೆ ಹಲವರು ನಿಂತು ಕಾಪಾಡಿದ್ದಾರೆ. ಅವರು ನಾಯಕತ್ವದಲ್ಲಿ ಈಗ ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ನನ್ನ ಬೆಂಬಲವನ್ನು ನೀಡಲು ಇಲ್ಲಿ ಬಂದಿದ್ದೇನೆ. ಈ ಮೂಲಕ ನನ್ನ ಸ್ಬೇಹಿತ ಪರ ನಾನು ನಿಲ್ಲುತ್ತೇನೆ. ನನ್ನ ತಂದೆ ನಾನು ನಂಬುತ್ತೇನೆ ಅದೇ ರೀತಿ ನಾನು ನನ್ನ ಬಸವರಾಜ ಬೊಮ್ಮಾಯಿ ಅವರನ್ನು ನಂಬುತ್ತೇನೆ ಎಂದರು.

ಚುನಾವಣೆಗೆ ಸ್ಪರ್ಧಿಸಲ್ಲ…!

  ನಾನು ಸಿನಿಮಾ ಬಿಟ್ಟು ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಮತ್ತು ನಾನು ನಮ್ಮ ಅಂಕಲ್‌ ಬೊಮ್ಮಾಯಿ ಯವರಿಗೆ ಸಪೋರ್ಟ್‌ ಮಾಡುತ್ತೇನೆ.ಇತ್ತ ಸುದೀಪ ರಾಜಕೀಯ ಸೇರ್ಪಡೆ ವದಂತಿ ಹರಡುತ್ತಿದ್ದಂತೆ ಅವರ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು ಎನ್ನಲಾಗಿದೆ .ಇತ್ತ ಜೀವನ ನೀಡಿದ ಅಭಿಮಾನಿಗಳ ಒತ್ತಾಸೆಯಂತೆ ನಾನು ಸಿನಿಆ ಬಿಡಲ್ಲ ಮತ್ತು ಎಂತಹುದೇ  ಸಂದರ್ಭದಲ್ಲಿಯೂ ರಾಜಕೀಯ ಪ್ರವೇಶ  ಪಡೆಯುವುದಿಲ್ಲ ಎಂದು ಸುದೀಪ್‌ ತಿಳಿಸಿದ್ದಾರೆ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ