ಕೇಂದ್ರ ಸರ್ಕಾರ ನಿಮ್ಮ ಐಫೋನ್‌ ಹ್ಯಾಕ್‌ ಮಾಡುತ್ತಿದೆ : ಏನಿದು ಸಂದೇಶ….?

ನವದೆಹಲಿ:

     ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗಳನ್ನು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ಕಂಪನಿ ಆಪಲ್ ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅದನ್ನು ವಿರೋಧ ಪಕ್ಷಗಳು ಸಂಸದರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

    ಪ್ರತಿಪಕ್ಷಗಳ ಐವರು ಸಂಸದರು ತಾವು ಆಪಲ್‌ನಿಂದ ಸ್ವೀಕರಿಸಿದ, ”ತಮ್ಮ ಐಫೋನ್‌ಗಳನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರು ದೂರದಿಂದಲೇ ಹ್ಯಾಕ್ ಮಾಡಲು ಪ್ರಯತ್ನಿಸಬಹುದು” ಎಂಬ ಎಚ್ಚರಿಕೆ ಸಂದೇಶವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.

    ವರದಿಗಳ ಪ್ರಕಾರ, ಟಿಎಂಸಿಯ ಮಹುವಾ ಮೊಯಿತ್ರಾ, ಶಿವಸೇನೆಯ(ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಎಎಪಿಯ ರಾಘವ್ ಚಡ್ಡಾ, ಕಾಂಗ್ರೆಸ್ ನಾಯಕ ಶಾಹಿ ತರೂರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಆಪಲ್‌ನಿಂದ ಈ ರೀತಿಯ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಮತ್ತು ಈ ಸಂಬಂಧ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

   “ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಅನ್ನು ಗುರಿಯಾಗಿಸಬಹುದು- ನಿಮ್ಮ Apple ID ಯೊಂದಿಗೆ ಸಂಬಂಧಿಸಿರುವ iPhone ಅನ್ನು ರಿಮೋಟ್ ಆಗಿ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದು Apple ನಂಬುತ್ತಿದೆ” ಎಂಬ ಆಪಲ್ ಸಂದೇಶವನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಟ್ವೀಟ್ ಮಾಡಿದ್ದಾರೆ.

   “ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಫೋನ್ ಗೆ ಪ್ರವೇಶ ಮಾಡಿದರೆ, ಅವರು ನಿಮ್ಮ ಸೂಕ್ಷ್ಮ ಸಂವಹನಕ್ಕೆ ಸಂಬಂಧಿಸಿದ ಡೇಟಾ, ಕ್ಯಾಮರಾ ಅಥವಾ ಮೈಕ್ರೊಫೋನ್‌ಗಳನ್ನು ದೂರದಿಂದಲೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ” ಎಂದು ಆಪಲ್ ಕೇಳಿಕೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap