ಬಿಜೆಪಿಯಿಂದ ಟಿಕೇಟ್‌ ನೀಡಿದರೂ ನಾನು ಸ್ಪರ್ಧಿಸಲ್ಲ: ಪವನ್‌ ಸಿಂಗ್‌

ನವದೆಹಲಿ :

   ಬಿಜೆಪಿ ಲೋಕಸಭೆ ಚುನಾವಣೆ 2024ರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಈ ವೇಳೆ ಬಿಜೆಪಿ ಟಿಕೆಟ್ ನೀಡಿದ್ದರೂ ಸಹ ಖ್ಯಾತ ಗಾಯಕನೊಬ್ಬ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಭೋಜ್‌ಪುರಿ ನಟ-ಗಾಯಕ ಪವನ್ ಸಿಂಗ್ ಘೋಷಿಸಿದ್ದಾರೆ. ಬಿಜೆಪಿ ಹೈಕಮಾಂಡ್‌ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಇದರಲ್ಲಿ 28 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗದ 57 ಅಭ್ಯರ್ಥಿಗಳಿಗೆ, ಎಸ್​ಸಿ ಸಮುದಾಯದ 27 ಅಭ್ಯರ್ಥಿಗಳು, 18 ಎಸ್​ಟಿ ಹಾಗೂ 50 ವರ್ಷದ ಕೆಳಗಿರುವ 47 ಯುವಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ ಮೋದಿ ಕ್ಯಾಬಿನೆಟ್​ನಲ್ಲಿದ್ದ 34 ಕೇಂದ್ರ ಸಚಿವರಿಗೆ ಮತ್ತೆ ಟಿಕೆಟ್​ ಖಚಿತವಾಗಿದೆ. ಇಬ್ಬರು ಮಾಜಿ ಸಿಎಂಗಳಿಗೂ ಟಿಕೆಟ್​ ನೀಡಲಾಗಿದೆ.

    ಖ್ಯಾತ ಭೋಜ್‌ಪುರಿ ಗಾಯಕ ಮತ್ತು ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್ ಅವರು ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದು, ಪವನ್ ಸಿಂಗ್ ಅವರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪಕ್ಷವು ನನ್ನನ್ನು ನಂಬಿ ನನ್ನನ್ನು ಅಸನ್ಸೋಲ್‌ನಿಂದ ಅಭ್ಯರ್ಥಿ ಎಂದು ಘೋಷಿಸಿತು, ಆದರೆ ಕಾರಣಾಂತರಗಳಿಂದ ನಾನು ಅಸನ್ಸೋಲ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಬಿಜೆಪಿ ಪ್ರಕಟಿಸಿದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಪವನ್ ಸಿಂಗ್ ಹೆಸರೂ ಸೇರಿತ್ತು. ಆದರೆ ತಾನು ಚುನಾವಣೆಯಿಂದ ಹಿಂದೆ ಸರಿಯಲು ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.

    ಪವನ್ ಸಿಂಗ್ ಅವರ ಈ ಪೋಸ್ಟ್ ಅನ್ನು ಮರುಪೋಸ್ಟ್ ಮಾಡುವ ಮೂಲಕ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಪಶ್ಚಿಮ ಬಂಗಾಳದ ಜನರ ಅದಮ್ಯ ಚೇತನ ಮತ್ತು ಶಕ್ತಿ’ ಎಂದು ಬರೆದಿದ್ದಾರೆ.

    ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಮಾತನಾಡಿ, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ, ಚುನಾವಣೆ ಘೋಷಣೆಯಾಗುವ ಮೊದಲೇ ಬಿಜೆಪಿ ಈಗಾಗಲೇ 1 ಸ್ಥಾನವನ್ನು ಬಿಟ್ಟುಕೊಟ್ಟಿದೆ. ಬಿಜೆಪಿ ಬಂಗಾಳಿ ವಿರೋಧಿ ಎಂದು ಯಾವಾಗಲೂ ಹೇಳುತ್ತಿದ್ದೆ. ಅವರು ಅಧಿಕಾರದಲ್ಲಿದ್ದ 10 ವರ್ಷಗಳಲ್ಲಿ ಅವರು ಯಾವುದೇ ಬಂಗಾಳಿಗಳಿಗೆ ಕ್ಯಾಬಿನೆಟ್ ಸ್ಥಾನ ನೀಡದಿರುವುದು ಅದಕ್ಕೆ ಸಾಕಷ್ಟು ಪುರಾವೆ ಆದರೆ ಈಗ ಅಸನ್ಸೋಲ್‌ನಿಂದ ಪವನ್ ಸಿಂಗ್ ಅವರನ್ನು ಕಣಕ್ಕಿಳಿಸುವುದು ಅವರ ವಿರುದ್ಧದ ಸಂವೇದನಾಶೀಲತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap