ಆಶ್ವಾಸನೆಗಳು ಈಡೇರದಿದ್ದರೆ ಅರೆಕ್ಷಣವು ಖರ್ಚಿಯಲ್ಲಿರಲಾರೆ : ಸಿದ್ದರಾಮಯ್ಯ

ತಿಪಟೂರು :

     ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ 165 ಆಶ್ವಾಸನೆಗಳಲ್ಲಿ 150 ಆಶ್ವಾಸನೆಗಳನ್ನು ಈಡೇರಿಸಿದ್ದ ಈ ಬಾರಿ ನೀಡುವ ಆಶ್ವಾಸನೆಗಳನ್ನು ನಾನು ಈಡೇರಿಸದಿದ್ದರೆ ಅರೆ ಕ್ಷಣವು ಖುರ್ಚಿಯಲ್ಲಿರಲಾರೆ ಇದು ಕಾಂಗ್ರೆಸ್ ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

     ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಜರುಗಿದ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳಿರುವಂತೆ ಇತಿಹಾಸವನ್ನು ಮರೆತವರು ಇತಿಹಾಸವನ್ನು ರಚಿಸಲಾರರು, ಆದರೆ ನಿಮ್ಮ ಶಿಕ್ಷಣ ಮಂತ್ರಿ ಇಂತಹ ಇತಿಹಾಸ ಮತ್ತು ಪಠ್ಯಪುಸ್ತಕವನ್ನು ತಿರುಚಿ ನಮ್ಮ ಭವ್ಯಭಾರತದ ಮಕ್ಕಳ ಜೊತೆ ಆಟವಾಡುತ್ತಾರೆ ಇಂತಹ ಶಾಸಕ ನಿಮಗೆ ಬೇಕೆ? ಎಂದು ಪ್ರಶಿಸಿದ ಅವರು ಆರ್.ಎಸ್.ಎಸ್ ಅಜೆಂಡವನ್ನು ಮುನ್ನೆಲೆಗೆ ತಂದು ಅದನ್ನು ಅನುಷ್ಠಾನಗೊಳಿಸುವುದೇ ಈ ನಾಗೇಶನ ಕೆಲಸವಾಗಿದೆ.

    ಇವರ ತಂದೆ ಬಿ.ಎಸ್ ಚಂದ್ರಶೇಖರಯ್ಯ ಪರವಾಗಿರಲಿಲ್ಲ ಆದರೆ ನಾಗೇಶ್ ಒಬ್ಬ ಅವಿವೇಕಿ ಶಾಸಕ, ಇಂತಹ ಅವಿವೇಕಿಯನ್ನು ಶಿಕ್ಷಣ ಮಂತ್ರಿಯನ್ನಾಗಿಸಿದ್ದ ದೇಶದ ವಿಪರ್ಯಾಸ ಎಂದು ಟೀಕಿಸಿದ ಅವರು. ಕೇಂದ್ರಲ್ಲಿ ಮೋದಿ ಮತ್ತು ರಾಜ್ಯದ ಬಿ.ಜೆ.ಪಿ ಮುಸ್ಲಿಂರ ಮತ ನಮಗೆ ಬೇಡ ಎನ್ನುತ್ತಾರೆ ಆದರೆ ಇವರು ಹೇಳುವ ಸಬ್‌ಕಾಸಾತ್ ಸಬ್‌ಕಾ ವಿಕಾಸ್‌ನಲ್ಲಿ ಮುಸ್ಲಿಂಮರು, ಕ್ರೈಸ್ಥರು ಇಲ್ಲದೇ ಸಬ್‌ಕ್ ವಿಕಾಸ್ ಹೇಗೆ ಆಗುತ್ತದೆ. ಏಕೆ ಮುಸ್ಲಿಂಮರು ಭಾರತೀಯರಲ್ಲವೇ, ರಾಜ್ಯದಲ್ಲಿ ಯಾರಿಗಾದರು ಒಬ್ಬ ಮುಸ್ಲಿಂ ಮತ್ತು ಕ್ರೆöÊಸ್ಥರಿಗೆ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಿಲ್ಲ, ಇನ್ನೆಲ್ಲಿ ಸಬ್‌ಕಾ ವಿಕಾಸ್ ಇದು ಸಬ್‌ಕಾ ಬರ್ಬಾದ್ ಎಂದರು.

     ಇನ್ನು ನಿಮ್ಮ ನಾಯಕ ಕೆ.ಷಡಕ್ಷರಿಯವರು ನಿಜವಾದ ಜನನಾಯಕ ತನ್ನ ಸ್ವಾರ್ಥಕ್ಕಾಗಿ ಒಂದು ಕೆಲವನ್ನು ಬಯಸದೇ ಸದಾ ತಾಲ್ಲೂಕಿನ ಅಭ್ಯುದಯಕ್ಕೆ ದುಡಿಯುವ ನಾಯಕ. ನನ್ನ ಊರಿಗೆ ಆಕೆಲಸ ಈಕೆಲಸ ಎಂದು ಕೇಳಿದಾಗ ನಾನು ಯಾವುದನ್ನು ಇಲ್ಲ ಎಂದಿಲ್ಲ. ನಿಮ್ಮ ಊರಿನ ಅಭಿವೃದ್ಧಿಗಾಗಿ ಹಾಗೂ ತಿಪಟೂರನ್ನು ಜಿಲ್ಲೆ ಮಾಡಬೇಂಬ ಹಠದಲ್ಲಿರುವ ಷಡಕ್ಷರಿಯವರಿಗೆ ಒತ್ತುವ ಒಂದೊAದು ಓಟು ಸಿದ್ದರಾಮಯ್ಯನಿಗೆ ಒತ್ತುವ ಓಟು. ಸೂರ್ಯಚಂದ್ರರು ಹುಟ್ಟುವುದು ಎಷ್ಟು ಸತ್ಯವೋ ಮೇ 10ರಂದು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡುವುದು ಅಷ್ಟೇ ಸತ್ಯ ಎಂಬುದನ್ನು ನೆನಪಿಟ್ಟುಕೊಂಡು ಕಾಂಗ್ರೆಸ್‌ಗ ಮತನೀಡಿ ಎಂದರು.

ಪೋಲೀಸರೇ ಎಚ್ಚರ :

     ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೋಲೀಸರ ವರ್ಗಾವಣೆಗೆ ಯಾವುದೇ ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲ ಆದರೆ ಭ್ರಷ್ಠ ಬಿ.ಜೆ.ಪಿ ಬಂದ ಮೇಲೆ ಹೆಚ್ಚಿನ ಆದಾಯ ಬರುವ ಠಾಣೆಗೆ ಅಧಿಕಾರಿಯಾಗಿ ಹೋಗಬೇಕಾದರೆ ಕೋಟ್ಯಾಂತರ ರೂ ಲಂಚಕೊಡಬೇಕು ಅಲ್ಲವೇ ಲೋಕೇಶ್ವರ್ ಎಂದಾಗ ಲೋಕೇಶ್ವರ್ ತಲೆಯಾಡಿಸಿದರು. ಆದರಿಂದ ಮತ ಹಾಕುವಾಗ ನೀವು ಎಚ್ಚರಿಕೆಯಿಂದ ಹಾಕಿ ಎಂದು ಆರಕ್ಷಕರಿಗೆ ಎಚ್ಚರಿಸಿದರು.

ಅತಂತ್ರ ಸ್ಥಿತಿ ನಿರ್ಮಾಣವಾಗಲಿ ಎಂಬುದೇ ಜೆ.ಡಿ.ಎಸ್ ಹರಕೆ : ಹೆಚ್.ಎಂ.ರೇವಣ್ಣ 
    ಒಂದು ಪಕ್ಷಕ್ಕೆ ಬಹುಮತ ಬರಲಿ ಎಂದು ಜನತೆ ಆಶೀಸಿದರೆ ಜೆ.ಡಿ.ಎಸ್‌ನವರು ಮಾತ್ರ ಯಾವದೇ ಪಕ್ಷಕ್ಕೆ ಬಹುಮತ ಬಾರದೇ ಇರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಇಂದು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಿರುವ ಅವರು ದೇವೆಗೌಡರನ್ನು ಪ್ರಧಾನಿಮಾಡಿದ್ದು, ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಮರೆತಿದ್ದಾರೆ. ಜೆ.ಡಿ.ಎಸ್ ಜೋಕರ್ ಇದ್ದಂತೆ ಅದು ಯಾವ ಪಕ್ಷದೊಂದಿಗೆ ಬೇಕಾದರು ಹೊಂದಿಕೊಳ್ಳುತ್ತದೆ. ಹಾಗೂ ಯಾರಲ್ಲಿ ಹಣವಿರುತ್ತದೋ ಅವರಿಗೆ ಜೆ.ಡಿ.ಎಸ್ ಟಿಕೆಟ್ ಸಿಗುತ್ತದೆ, ನೀವು ಜೆ.ಡಿ.ಎಸ್‌ಗೆ ಒತ್ತುವ ಒಂದೊAದು ಓಟು ಕೋಮುವಾದಿ ಬಿ.ಜೆ.ಪಿಗೆ ಒತ್ತಿದಂತೆ ನಿಮ್ಮ ಮತವೇನಿದ್ದರು ಅಭಯ ಹಸ್ತಕ್ಕೆ ನೀಡಿ ಅಬಿವೃದ್ಧಿಗೆ ಸಹಕರಿಸಿ ಎಂದು ಕರೆನಿಡಿದರು.

ಕಾಂಗ್ರೆಸ್ ಗ್ಯಾರಂಟಿ, ಗುಜರಾತ್ ಗೋರಂಟಿಯಲ್ಲ : ಉಮಾಶ್ರೀ

     ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಕಾಂಗ್ರೆಸ್ ಬಡಜನರ, ದೀನದಲಿತ ಅಭಿವೃದ್ಧಿಗೆ ದುಡಿಯುವ ಪಕ್ಷ ಇಂತಹ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾನಾಡುವ ವಿರೋಧಪಕ್ಷವರು ಚೆನ್ನಾಗಿ ನೆನಪಿಸಿಕೊಳ್ಳಿ ಇದು ಗುಜರಾತ್ ಗೋರಂಟಿಯಲ್ಲ, ಕಾಂಗ್ರೆಸ್ ಗ್ಯಾರಂಟಿ, ಗುಜರಾತ್ ಗೋರಂಟಿ 2 ದಿನ ಕಾಂಗ್ರೆಸ್ ಗ್ಯಾರಂಟಿ ಐದು ವರ್ಷ ಎಂದ ಅವರು ಬಿ.ಜೆ.ಪಿ ಪಕ್ಷ ರೈತರನ್ನು ನಾಶಮಾಡಲು ಹೊರಟಿದೆ ಆದರೆ ಈ ಬಾರಿ ರೈತರೇ ಬಿ.ಜೆ.ಪಿಯನ್ನು ನಾಶಮಾಡಲಿದ್ದು ಬಿ.ಜೆ.ಪಿ ನಾಶವಾಗಲಿದೆ. ಆದ್ದರಿಂದ ನಿಮ್ಮ ತಿಪಟೂರಿನ ಅಭಿವೃದ್ಧಿಗಾಗಿ ನಮ್ಮ ಅಣ್ಣ ಷಡಣ್ಣನಿಗೆ ಮತನೀಡಿ ಎಂದು ವಿನಂತಿಸಿದರು.

    ತಿಪಟೂರು ಅಭ್ಯರ್ಥಿ ಕೆ.ಷಡಕ್ಷರಿ ಮಾತನಾಡಿ, ತಿಪಟೂರುನ್ನು ಜಿಲ್ಲೆ ಮಾಡಬೇಕೆಂಬ ಕನಸು ಹಾಗೆಯೇ ಉಳಿದಿದೆ, ಕಳೆದಬಾರಿಯೇ ಸಿದ್ದರಾಮಯ್ಯನವರು ತಿಪಟೂರುನ್ನು ಜಿಲ್ಲೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ, ಆಗಲೇ ಸಿದ್ದರಾಮಯ್ಯನವರು ಹೇಳಿದ್ದರು ಮುಂದಿನ ಬಾರಿಗೆ ಮಾಡೋಣ ಎಂದು ಅದರಂತೆ ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ತಿಪಟೂರನ್ನು ಜಿಲ್ಲೆಮಾಡುತ್ತಾರೆ ಹಾಗೂ ತಿಪಟೂರಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ ಇನ್ನು ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡುತ್ತಾರೆ ಎಂದು ಹೇಳಿ ಎಲ್ಲರನ್ನು ಸ್ವಾಗತಿಸಿದರು.

     ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಚುನಾವಣಾ ವಿಕ್ಷಕ ರೆಹಮಾನ್, ಮುರಳೀಧರ್ ಹಾಲಪ್ಪ, ಲೋಕೇಶ್ವರ್, ಕಾಂತರಾಜು, ಹರಿಪ್ರಸಾದ್.ಬಿ.ವಸಂತ್, ನಿಖಿಲ್‌ರಾಜಣ್ಣ, ಸೊಪ್ಪುಗಣೇಶ್, ಯೋಗೀಶ್, ಕಾಂತರಾಜು, ನ್ಯಾಕೇನಹಳ್ಳಿ ಸುರೇಶ್, ಶಿವಸ್ವಾಮಿ, ಪ್ರಕಾಶ್ ಮತ್ತಿತರರ ನಾಯಕರು ಮುಖಂಡರುಗಳು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap