ನವದೆಹಲಿ:
ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ಭಾರತೀಯ ವಾಯುಪಡೆ (ಐಎಎಫ್) 156 ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಗಳನ್ನು ಖರೀದಿಸಲು ಮುಂದಾಗಿದೆ.
ಐಎಎಫ್ ಪ್ರಚಂಡ ಹೆಲಿಕಾಫ್ಟರ್ ಗಳ ಖರೀದಿಗೆ ಹೆಚ್ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಗಳನ್ನು ಚೀನಾ-ಪಾಕ್ ಗಡಿ ಭಾಗಗಳಲ್ಲಿ ನಿಯೋಜಿಸುವ ಪ್ರಸ್ತಾವನೆ ಇದೆ.
ಭಾರತೀಯ ಸೇನೆ ಹಾಗೂ ವಾಯುಪಡೆಗಳು ಈಗಾಗಲೇ 15 ಪ್ರಚಂಡ ಹೆಲಿಕಾಫ್ಟರ್ ಗಳನ್ನು ಖರೀದಿಸಿದೆ. ಇದಕ್ಕೂ ಮುನ್ನ ತೀವ್ರ ಪರಿಸ್ಥಿತಿಗಳಲ್ಲಿ ಹೆಲಿಕಾಫ್ಟರ್ ಗಳನ್ನು ಪರೀಕ್ಷಿಸಲಾಗಿದೆ.